ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಅಕ್ರಮ ಸರಾಯಿ ಹಾಗೂ ಕಲಬೆರಕೆ ಮಧ್ಯ ಮಾರಾಟ ಸದ್ದು ಮಾಡುತ್ತಿದೆ. ಅಕ್ರಮ ಮಧ್ಯ ಮಾರಾಟದ ಜೊತೆಗೆ ಈಗ ಕಲಬೆರಕೆ (ಮಿಶ್ರಣ) ಮಧ್ಯ ವ್ಯಾಪಕವಾಗಿ ಹರಡಿಕೊಂಡಿದ್ದು, ಇದರ ಪರಿಣಾಮವಾಗಿ ಹಲವರು ಜೀವ ಕಳೆದುಕೊಳ್ಳುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ.
ಗ್ರಾಮೀಣ ಪ್ರದೇಶದಲ್ಲಂತೂ, ಓಣಿ ಬೀದಿಗಳಲ್ಲಿ ರಾಜಾರೋಷವಾಗಿ ಮಧ್ಯ ಮಾರಾಟ ಜೋರಾಗಿದೆ, ಕೆಲವು ಕಿರಾಣಿ ಅಂಗಡಿಗಳು ಮತ್ತು ಗೂಡಂಗಡಿಗಳಲ್ಲಿಯೂ ಈ ಕಲಬೆರಕೆ ಮಧ್ಯವನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ..ಇತಂಹ ಮದ್ಯ ಸೇವನೆಯಿಂದ ಹಲವರು ಅಸ್ವಸ್ಥರಾಗಿ ಸಾವನ್ನಪ್ಪುತ್ತಿರುವುದು ಕೇಳಿಬರುತ್ತಿದೆ.,
ಅದರಲ್ಲೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ.ಜಿಲ್ಲೆಯ ವಿವಿಧ ಭಾಗಗಳಲ್ಲಿ ಗೋವಾ ಮಧ್ಯದ ಜೊತೆಗೆ ಕಮರಿಪೇಟೆ ಮಧ್ಯ ಇತಿಹಾಸ ಪುಟ ಸೇರಿದರು. ಅದರ ಸ್ಥಾಪಕರು ರಾಜ್ಯದ ನಾನಾ ಕಡೆಯಲ್ಲಿ ಹುಟ್ಟಿಕೊಂಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಸ್ಪಿರೀಟ್ ಬಳಕೆ ಮಾಡಿ ಮಧ್ಯ ತಯಾರಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಸಹ ಇದೆ.ಸ್ಥಳೀಯವಾಗಿ ಅಕ್ರಮವಾಗಿ ಮಧ್ಯ ತಯಾರಿಸುತ್ತಿದ್ದಾರೆ ಎನ್ನಲಾಗುತ್ತಿದೆ, ಈ ಅಕ್ರಮ ಚಟುವಟಿಕೆಗೆ ತಕ್ಷಣ ಕಡಿವಾಣ ಹಾಕದಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹೆಚ್ಚು ಜೀವಹಾನಿ ಸಂಭವಿಸುವ ಭೀತಿ ಕೂಡ ಎದುರಾಗಿದೆ. ಪ್ರಮುಖವಾಗಿ ಜಿಲ್ಲೆಯ ಕರಾವಳಿ ತಾಲೂಕುಗಳಾದ ಅಂಕೋಲಾ, ಕುಮಟಾ, ಹೊನ್ನಾವರ ಭಾಗದಲ್ಲಿ ಈ ಕಲಬೆರಕೆ ಮಧ್ಯ ಮಾರಾಟ ಜೋರಾಗಿದೆ.
ಈ ಬಗ್ಗೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಅಕ್ರಮ ಮಧ್ಯ ಮಾರಾಟ ಹಾಗೂ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಲು ಜಿಲ್ಲೆಯಲ್ಲಿ ವಿಶೇಷ ತನಿಖಾ ತಂಡವನ್ನ ರಚನೆ ಮಾಡಬೇಕಿದೆ.ಆ ರೀತಿ ತಂಡ ಏನಾದರೂ ರಚನೆ ಮಾಡಿ ಪಕ್ಕಾ ಕಾರ್ಯಚರಣೆಗೆ ಇಳಿದರೆ. ಅದೆಷ್ಟೆ ಜೀವ ಇನ್ನೂ ಬದುಕಿ ಉಳಿಯಬಹುದಾಗಿದೆ. ಇದುವರೆಗೆ ಮಧ್ಯಸೇವನೆಯಿಂದ ಸಾವನ್ನಪ್ಪಿದವರ ಬಗ್ಗೆ ಸಹ ಮಾಹಿತಿ ಕಲೆಹಾಕಿ ಅಕ್ರಮ ಮಧ್ಯಮಾರಾಟಗಾರರಿಗೆ ಬುದ್ದಿಕಲಿಸಬೇಕಾದ ಜವಾಬ್ದಾರಿ ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಮೇಲಿದೆ…ಅಬಕಾರಿ ಇಲಾಖೆಯವರು ಕೇವಲ ಗೋವಾ ಗಡಿದಾಟಿ ಬರುವ ವಾಹನಗಳನ್ನಷ್ಟೆ ತಪಾಸಣೆ ಮಾಡದೆ. ಈ ರೀತಿಯಾಗಿ ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಮಧ್ಯಮಾರಾಟ ಮಾಡುವವರ ಮೇಲೆ ದಾಳಿಗೆ ಇಳಿಯಬೇಕಿದೆ..
ಮುಂದುವರೆಯುವುದು…..

