ಸುದ್ದಿಬಿಂದು ಬ್ಯೂರೋ ವರದಿ (suddibindu digital news)
ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈಪಾಸ್ ಬಳಿ ಸಿಂದಗಿ ಕ್ಷೇತ್ರದ ಕಾಂಗ್ರೇಸ್ ಶಾಸಕ ಅಶೋಕ ಮನಗೂಳಿ ಅವರ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.

ಶಾಸಕ ಅಶೋಕ ಮನಗೂಳಿ ಅವರ KA 03 NT 2827 ನಂಬರ್‌ನ ಇನೋವಾ ಹೈಕ್ರೊಸ್ ಕಾರು ಮತ್ತು ಕಲಬುರ್ಗಿಯಿಂದ ಸಿಂದಗಿ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಕಾರು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಅಪಘಾತದ ವೇಳೆ ಶಾಸಕರ ಕಾರಿನಲ್ಲಿ ಅವರ ಪುತ್ರಿ ಹಾಗೂ ಸಹೋದರನ ಪುತ್ರ ಮಾತ್ರ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ

ಶಾಸಕರ ಕಾರು ವಿಧಾನಸೌಧ ಪಾಸ್ ಹೊಂದಿದ್ದ ಖಾಸಗಿ ಕಾರು ಆಗಿದ್ದು, ಅಪಘಾತ ಸಂಭವಿಸಿದ್ದು,  ಸಿಂದಗಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆ ಬಗ್ಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ/ಪತ್ನಿ ಮನೆಗೆ ಬಾರದಕ್ಕೆ ಪತಿ ಆತ್ಮಹತ್ಯೆ