ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಚಿಪ್ಪಿಕಲ್ಲು ಆರಿಸಲು ಹೋದ ವ್ಯಕ್ತಿ ಓರ್ವ ಸಮುದ್ರದಲ್ಲಿ ಮುಳುಗಿ ಮೃತ ಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೇಕೇರಿಯಲ್ಲಿ ನಡೆದಿದೆ.
ಮೃತ ವ್ಯಕ್ತಿ ಭಾವಿಕೇರಿಯ ಆನಂದು ನಾಯ್ಕ್ (52) ಎಂದು ಗುರುತಿಸಲಾಗಿದೆ. ಅವರು ಕರಾವಳಿಯ ಸಾಂಪ್ರದಾಯಿಕ ಸಮುದ್ರ ಆಹಾರವಾದ ಚಿಪ್ಪಿಕಲ್ಲು (ಶೆಲ್ ಮೀನು) ಆರಿಸಲು ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.
ಘಟನೆ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ/ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ಸಾವು