ದೀಪಾವಳಿ ಹಬ್ಬದ ಶುಭ ಗಳಿಗೆಯಲ್ಲಿ ಚಿನ್ನ ಖರೀದಿದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಕೆಲವು ವಾರಗಳಿಂದ ಏರಿಕೆ ಕಂಡಿದ್ದ ಬಂಗಾರದ ದರ ಇಂದು ಕುಸಿದಿದ್ದು, ಖರೀದಿದಾರರಲ್ಲಿ ಸಂತೋಷ ಉಂಟಾಗುವಂತೆ ಮಾಡಿದೆ. ಹಬ್ಬದ ಸಂಭ್ರಮದ ಜೊತೆ ಚಿನ್ನದ ಖರೀದಿಗೂ ಚೈತನ್ಯ ಬಂದಿದೆ.
ಭಾರತದಲ್ಲಿ ಚಿನ್ನವನ್ನು ಕೇವಲ ಆಭರಣವಷ್ಟೇ ಅಲ್ಲ, ಸಂಪತ್ತಿನ ಹಾಗೂ ಸಮೃದ್ಧಿಯ ಪ್ರತೀಕ ಎಂದು ಕಾಣಲಾಗುತ್ತದೆ. ಹೀಗಾಗಿ ದೀಪಾವಳಿ, ಮದುವೆ, ಮುಹೂರ್ತಗಳಲ್ಲಿ ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತವೆ. ಆರ್ಥಿಕ ಅಸ್ಥಿರತೆಯ ಸಮಯದಲ್ಲಿ ಚಿನ್ನವು ವಿಶ್ವಾಸಾರ್ಹ ಹೂಡಿಕೆ ಎನ್ನುವುದರಲ್ಲಿ ಸಂಶಯವಿಲ್ಲ.
ಇಂದಿನ ಚಿನ್ನದ ದರ (20 ಅಕ್ಟೋಬರ್ 2025)
ಬೆಂಗಳೂರು: 22 ಕ್ಯಾರಟ್ (10 ಗ್ರಾಂ) – ₹1,19,800
24 ಕ್ಯಾರಟ್ (ಅಪರಂಜಿ) – ₹1,30,690
ಪ್ರಮುಖ ನಗರದಲ್ಲಿನ ದರ: ಚೆನ್ನೈ – ₹1,19,800,ಮುಂಬೈ – ₹1,19,800, ಕೊಲ್ಕತ್ತಾ – ₹1,19,800, ನವದೆಹಲಿಯಲ್ಲಿ – ₹1,30,840
ಪ್ರತಿ ಗ್ರಾಂ ಚಿನ್ನದ ಇಂದಿನ ಬೆಲೆ
18 ಕ್ಯಾರಟ್ – ₹9,802,
22 ಕ್ಯಾರಟ್ – ₹11,980
24 ಕ್ಯಾರಟ್ (ಅಪರಂಜಿ) – ₹13,069
8 ಗ್ರಾಂ ಬೆಲೆ: 18 ಕ್ಯಾರಟ್ – ₹78,416, 22 ಕ್ಯಾರಟ್ – ₹95,840, 24 ಕ್ಯಾರಟ್ – ₹1,04,552
100 ಗ್ರಾಂ ಬೆಲೆ:
18 ಕ್ಯಾರಟ್ – ₹9,80,200, 22 ಕ್ಯಾರಟ್ – ₹11,98,000, 24 ಕ್ಯಾರಟ್ – ₹13,06,900
ಬೆಳ್ಳಿ ದರದಲ್ಲೂ ಇಳಿಕೆ
ಚಿನ್ನದಷ್ಟೇ ಬೆಳ್ಳಿ ಕೂಡ ಹಬ್ಬದ ಸಮಯದಲ್ಲಿ ಹೆಚ್ಚು ಖರೀದಿಯಾಗುತ್ತದೆ. ಇಂದಿನ ಮಾರುಕಟ್ಟೆಯಲ್ಲಿ ಬೆಳ್ಳಿಯ ದರವು ನಿನ್ನೆಗಿಂತ ಸ್ವಲ್ಪ ಇಳಿಕೆಯಾಗಿದೆ.
ಇಂದಿನ ಬೆಳ್ಳಿ ದರ: 10 ಗ್ರಾಂ – ₹1,720, 100 ಗ್ರಾಂ – ₹17,200, 1 ಕೆಜಿ – ₹1,72,000
ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (1 ಕೆಜಿ):
ಬೆಂಗಳೂರು – ₹1,72,000, ಮುಂಬೈ – ₹1,72,000, ದೆಹಲಿ – ₹1,72,000, ಚೆನ್ನೈ – ₹1,90,000, ಕೊಲ್ಕತ್ತಾ – ₹1,72,000
ಗಮನಿಸಿ: ಈ ದರಗಳು ಅಂದಾಜು ಮಾರುಕಟ್ಟೆ ಬೆಲೆಗಳಾಗಿದ್ದು, ಜಿಎಸ್ಟಿ ಹಾಗೂ ಇತರೆ ಶುಲ್ಕಗಳನ್ನು ಒಳಗೊಂಡಿಲ್ಲ. ನಿಖರ ದರಕ್ಕಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಯನ್ನು ಸಂಪರ್ಕಿಸುವುದು ಒಳ್ಳೆಯದು.
ಇದನ್ನೂ ಓದಿ/ವಿದ್ಯುತ್ ತಂತಿ ಹರಿದು ಬಿದ್ದು ದಂಪತಿ ಸಾವು :ಹೊನ್ನಾವರದಲ್ಲಿ ಘಟನೆ