ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ :ಸಾರಿಗೆ ಬಸ್ ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತದಲ್ಲಿ ಸ್ಕೂಟಿ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಬಾಂಡಿಶಿಟ್ಟಾ ಬಳಿ ನಡೆದಿದೆ.
ಮೇತ್ರಿವಾಡದ ಸುಶೀಲಾ ಕಮಾಲಕರ ನಾಯ್ಕ (65) ಮೃತ ಮಹಿಳೆ ಎಂದು ಗುರುತಿಸಲಾಗಿದೆ ಸ್ಕೂಟಿಯಲ್ಲಿ ಇಬ್ಬರು ಶೇಜವಾಡ ಕಡೆಯಿಂದ ಕಾರವಾರ ನಗರದ ಕಡೆ ಬರುತ್ತಿದ್ದು, ಈ ವೇಳೆ ಕಾರವಾರದಿಂದ ಕಡವಾಡ ಕಡೆ ಹೋಗುತ್ತಿದ್ದ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಇದರಿಂದ ಸ್ಕೂಟಿ ಹಿಂಬದಿಯಲ್ಲಿ ಕುಳಿತಿದ್ದ. ಮಹಿಳೆಗೆ ಗಂಭೀರವಾಗಿ ಗಾಯಗೊಂಡು ಸ್ಥಳಲ್ಲೇ ಸಾವನ್ನಪ್ಪಿದ್ದಾಳೆ.
ಇನ್ನೂ ಸ್ಕೂಟಿ ಚಲಿಸುತ್ತಿ ವ್ಯಕ್ತಿಗೆ ಗಾಯವಾಗಿದ್ದು, ಆತನಿಗೆ ಕಾರವಾರ ಕ್ರಿಮ್ಸ್‌ಗೆ ದಾಖಲಿಸಲಾಗಿದೆ. ಕಾರವಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ/ ಕೆಡಿಸಿಸಿ ಬ್ಯಾಂಕ್ ಚುನಾವಣೆ : 11 ಅಭ್ಯರ್ಥಿಗಳಿಂದ ನಾಮಪತ್ರ ಹಿಂದಕ್ಕೆ 33 ಅಭ್ಯರ್ಥಿಗಳು ಕಣದಲ್ಲಿ