ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ : ಮದುವೆ ರಿಸೆಪ್ಷನ್ನಲ್ಲಿ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದ ಎರಡು ಗುಂಪುಗಳ ನಡುವ ಗಲಾಟೆ ನಡೆದು ಐವರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ..
ಹನೀಫಾಬಾದ್ನ ಕಸ್ನುಮ್ ಮದುವೆ ಸಭಾಭವನದಲ್ಲಿ ನಡೆದಿದೆ. ಪಾರ್ಕಿಂಗ್ ವಿಚಾರದಲ್ಲಿ ಉಂಟಾದ ವಾಗ್ವಾದ ಹೊಡೆದಾಡುಕೊಳ್ಳುವ ಮಟ್ಟಕ್ಕೆ ತಲುಪಿದೆ. ಘಟನೆಯಲ್ಲಿ ಐದು ಮಂದಿ ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಡೆದಾಟ ಮಾಡಿಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮದುವೆ ಸಮಾರಂಭದಲ್ಲಿ ನಡೆದ ಈ ಗಲಾಟೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎರಡು ಗುಂಪುಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Bhatkal: Clash Over Parking at Wedding Reception Leaves Five InjuredA clash broke out between two groups over a parking dispute during a wedding reception in Bhatkal, Uttara Kannada district, leaving five people injured. The incident occurred at the Kasnum Marriage Hall in Hanifabad.An argument over vehicle parking soon escalated into a physical fight, resulting in serious injuries to five youths who were rushed to a nearby hospital for treatment. Videos of the brawl have since gone viral on social media.The altercation, which reportedly took place during the wedding event, came to light later in the day. Police at the Bhatkal Rural Station have registered cases against both groups involved and have initiated further investigation.
ಇದನ್ನೂ ಓದಿ/ Murudeshwar Beach/ಮುರುಡೇಶ್ವರ ಕಡಲತೀರಕ್ಕೆ ಜೀವಕಳೆ—ಬೋಟಿಂಗ್, ವಾಟರ್ ಸ್ಪೋರ್ಟ್ಸ್ ಆರಂಭ