ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ : ಸ್ನೇಹಿತರ ಜೊತೆ ಪಿಕ್ನಿಕ್‌ಗೆ ತೆರಳಿದ ವೇಳೆ ಕಾಲು ಜಾರಿ ಹೊಳೆಯಲ್ಲಿ ಬಿದ್ದು ನಾಪತ್ತೆಯಾದ ಯುವಕ‌ನ ಶವ ಕೈಗಾಡಿ ಹೊಳೆಯಲ್ಲಿ ಪತ್ತೆಯಾಗಿದೆ.

ಯಲ್ಲಾಪುರದ ನಿವಾಸಿಯಾಗಿದ್ದ ಸಾಗರ್ ದೇವಾಡಿಗ (23) ಎಂಬಾತನೆ ನಾಪತ್ತೆಯಾಗಿದ್ದ ಯುವಕನಾಗಿದ್ದ, ಈತ ಕಳೆದ ಎರಡು ದಿನಗಳ ಹಿಂದೆ ತನ್ನ ಸ್ನೇಹಿತರ ಜೊತೆಯಲ್ಲಿ ಪಿಕ್ನಿಕ್‌ಗೆ ಹೋಗಿದ್ದು, ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ, ಬಳಿಕ ಆತನ ಪತ್ತೆಗಾಗಿ ಕೈಗಾಡಿ ನಿವಾಸಿಗಳಾದ ಗಣಪತಿ ಸಿದ್ದಿ, ರಾಮ ಸಿದ್ದಿ , ವೆಂಕ ಸಿದ್ದಿ ಹಾಗೂ ನಾರಾಯಣ ಸಿದ್ದಿ ಎಲ್ಲರೂ ಸೇರಿ ಹೊಳೆಯಲ್ಲಿ ಪತ್ತೆಯಾದ ಶವವನ್ನ ಮೇಲಕ್ಕೆ ಎತ್ತಿದ್ದಾರೆ.

ಇದೀಗ ನಾಪತ್ತೆಯಾದ ಯುವಕ ಶವ ಹೊಳೆಯಲ್ಲಿ ತೇಲಿಬಂದಿದೆ. ಈಗಾಗಲೇ ಶವವನ್ನ ಹೊಳೆಯಿಂದ ಮೇಲೆ ಎತ್ತಲಾಗಿದ್ದು, ಮೃತ ಯುವಕ ಸಾಗರ್ ಎಂಬುವುದಾಗಿ ಕುಟುಂಬಸ್ಥರು ಖಚಿತ ಪಡಿಸಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಇದನ್ನೂ ಓದಿ:ಹೆಂಡತಿಯನ್ನು ಕೊಂದು ಬೆಡ್ ಕೆಳಗೆ ಹೆಣ ಅಡಗಿಸಿದ ಪತಿ!