ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ರಾಮನಗರದ ಜಾಲಿವುಡ್ ಸ್ಟುಡಿಯೋದಲ್ಲಿನ ಬಿಗ್ ಬಾಸ್ ಕನ್ನಡ ಶೋಗೆ ಮತ್ತೆ ಹಸಿರು ನಿಶಾನೆ ದೊರೆತಿದೆ. ಕೆಲವು ದಿನಗಳ ವಿರಾಮದ ಬಳಿಕ ಸ್ಟುಡಿಯೋ ಬಾಗಿಲು ತೆರೆಯಲ್ಪಟ್ಟಿದ್ದು, ಎಲ್ಲಾ 17 ಸ್ಪರ್ಧಿಗಳು ಪುನಃ ಬಿಗ್ ಬಾಸ್ ಮನೆಯಲ್ಲಿ ಕಾಲಿಟ್ಟಿದ್ದಾರೆ.

ನಸುಕಿನ ವೇಳೆ ಸುಮಾರು 2.45ಕ್ಕೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಎಸ್‌ಪಿ ಶ್ರೀನಿವಾಸ್ ಗೌಡ, ತಹಶಿಲ್ದಾರ್ ತೇಜಸ್ವಿನಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಟುಡಿಯೋ ಸೀಲ್ ತೆರೆಯುವ ಕಾರ್ಯ ನಡೆಸಿದರು. ಇದರ ನಂತರ ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಬಿಡುಗಡೆ ಮಾಡಿ ಶೋ ಪುನರಾರಂಭದ ಸುಳಿವು ನೀಡಿದೆ.

ಜಾಲಿವುಡ್ ಸ್ಟುಡಿಯೋದ ಗೇಟ್ C ಮಾತ್ರ ತೆರೆಯುವಂತಾಗಿದ್ದು, ಬಿಗ್ ಬಾಸ್ ಮನೆಯ ಪ್ರವೇಶದ್ವಾರವನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ತೆರೆದಿದ್ದಾರೆ. ಸ್ಟುಡಿಯೋವನ್ನು ಸಾರ್ವಜನಿಕರಿಗೆ ತೆರೆಯುವ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಮುಂಜಾನೆ ಸುಮಾರು 4 ಗಂಟೆಗೆ ಈಗಲ್‌ಟನ್ ರೆಸಾರ್ಟ್‌ನಿಂದ ಎಲ್ಲ ಸ್ಪರ್ಧಿಗಳನ್ನು ಕಾರುಗಳಲ್ಲಿ ಕರೆತರಲಾಗಿದ್ದು, ವಾಹನಗಳ ಗಾಜುಗಳಿಗೆ ಕಪ್ಪು ಬಟ್ಟೆ ಸುತ್ತಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ.

ಸ್ಥಳದಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಶೂಟಿಂಗ್ ಪ್ರದೇಶವನ್ನು ಭಾಗಶಃ ತೆರೆಯಲಾಗಿದೆ ಎಂದು ಹೇಳಿದರು. “ಜಾಲಿವುಡ್ ಸಂಪೂರ್ಣವಾಗಿ ಕಾರ್ಯಾಚರಣೆಗೆ ಮುಕ್ತವಲ್ಲ; ಬಿಗ್ ಬಾಸ್ ಶೋ ತಂಡ ಹಾಗೂ ತಾಂತ್ರಿಕ ಸಿಬ್ಬಂದಿ ಮಾತ್ರ ಸ್ಥಳ ಪ್ರವೇಶಕ್ಕೆ ಅನುಮತಿಸಲಾಗಿದೆ. ಶೂಟಿಂಗ್ ಪುನರಾರಂಭ ಕುರಿತು ಅಂತಿಮ ನಿರ್ಧಾರ ನಾಳೆ ಪ್ರಕಟವಾಗಲಿದೆ,” ಎಂದು ಅವರು ಸ್ಪಷ್ಟಪಡಿಸಿದರು.

Bengaluru: The Bigg Boss Kannada reality show has been given the green signal to resume shooting at the Jalewood Studio in Ramanagara. After a brief halt, the studio doors have reopened, and all 17 contestants have re-entered the Bigg Boss house.

At around 2:45 a.m., Ramanagara District Commissioner Yashwanth V. Gurukar, SP Srinivas Gowda, Tahsildar Tejaswini, and Revenue Department officials arrived at the studio and supervised the unsealing process. Following this, Colors Kannada released a new promo hinting at the show’s restart.

Only Gate C of the Jalewood Studio has been opened, and the Bigg Boss house’s main entrance was unlocked in the presence of district officials. There is no official confirmation yet regarding the studio being reopened to the public. Around 4 a.m., all contestants were brought from the Eagleton Resort in cars with black-tinted windows as part of security measures.

Speaking to the media, Bengaluru South Deputy Commissioner Yashwanth V. Gurukar stated that the partial reopening of the shooting area was carried out under the directions of Deputy Chief Minister D.K. Shivakumar. “Jalewood has not been fully reopened; only the Bigg Boss team and technical staff are permitted entry. The final decision regarding the full resumption of shooting will be announced tomorrow,” he clarified.

ಇದನ್ನೂ ಓದಿ: ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ