ಪುಟ್ಟಮಕ್ಕಳು ತಿಂಡಿಗಾಗಿ ಪಾಲಕರ ಎದುರು ಹಠ ಮಾಡುವುದು ಸಾಮಾನ್ಯ, ಆದರೆ ಇಲ್ಲೊಬ್ಬ ಬಾಲಕ ತನ್ನ ತಾಯಿ ಕುರ್‌ಕುರೆ ತರುವುದಕ್ಕೆ ಹಣ‌ಕೊಡದೆ ಇರುವುದಕ್ಕೆ ಆತ 112ಗೆ ಕರೆ ಮಾಡಿ ತಾಯಿ ಹಾಗೂ ಅಕ್ಕನ ವಿರುದ್ಧವೇ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.

ಹೌದು ಭೋಪಾಲ್‌ನಲ್ಲಿ ಈ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಸಿಂಗ್ರೋಲಿ ಜಿಲ್ಲೆಯ ಚಿತರ್‌ವೈ ಕಲಾ ಗ್ರಾಮದಲ್ಲಿ 8 ವರ್ಷದ ಬಾಲಕನೊಬ್ಬ ತನ್ನ ಅಮ್ಮ ಮತ್ತು ಅಕ್ಕ ತಮ್ಮನ್ನು ಹೊಡೆದಿದ್ದಾರೆ ಎಂದು ಪೊಲೀಸರಿಗೆ ದೂರಿಸಿದ್ದಾನೆ.

ಬಾಲಕ ಕುರ್‌ಕುರೆಗಾಗಿ ತಾಯಿ ಬಳಿ 20 ರೂಪಾಯಿ ಕೊಡುವಂತೆ ಕೇಳಿದ್ದಾನೆ. ಅದಕ್ಕೆ ತಾಯಿ ನಿರಾಕರಿಸಿದಾಗ, ಬಾಲಕ ಹಠ ಹಿಡಿದಿದ್ದಾನೆ. ಈ ವೇಳೆ ತಾಯಿ ಹಾಗೂ ಅಕ್ಕ ಸೇರಿ ಆತನನ್ನು ಹೊಡೆದಿದ್ದಾರೆ ಎನ್ನಲಾಗಿದೆ. ಇದಕ್ಕೆ ಕೋಪಗೊಂಡ ಬಾಲಕ ತಾಯಿ ಮೊಬೈಲ್ ತೆಗೆದುಕೊಂಡು 112 ತುರ್ತು ಪೊಲೀಸ್ ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಫೋನ್ ಸ್ವೀಕರಿಸಿದ ಪೊಲೀಸರು ಬಾಲಕನ ಅಳಲು ಕೇಳಿ ಆಶ್ಚರ್ಯಗೊಂಡರು. ಅವರು ಮಗುವಿಗೆ ಸಮಾಧಾನ ಹೇಳಿ ಭೇಟಿ ನೀಡುವುದಾಗಿ ಭರವಸೆ ನೀಡಿದರು.

ಬಳಿಕ ಪೊಲೀಸರು ಆ ಮನೆಯತ್ತ ತೆರಳಿ ಬಾಲಕನ ಕುಟುಂಬದವರ ಜೊತೆ ಮಾತನಾಡಿದರು. ತಾಯಿಗೆ ಮಗುವನ್ನು ಹೊಡೆಯಬಾರದು ಎಂದು ಎಚ್ಚರಿಕೆ ನೀಡಿದರು ಮತ್ತು ಬಾಲಕನಿಗೆ ಕುರ್‌ಕುರೆ ಪ್ಯಾಕೆಟ್‌ಗಳನ್ನು ನೀಡಿ ಸಂತೋಷಪಡಿಸಿದರು.ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಿದ್ದು, ಪೊಲೀಸರು ಮಗುವಿನ ಮನಸ್ಸು ಸಮಾಧಾನಪಡಿಸಿದ ರೀತಿಗೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

An unusual incident has come to light from Bhopal, where a young boy called the police emergency number 112 to file a complaint against his own mother and sister for refusing to give him money to buy Kurkure snacks.

The incident took place in Chitravai Kala village of Singrauli district, Madhya Pradesh. The 8-year-old boy reportedly asked his mother for ₹20 to buy a packet of Kurkure. When his mother refused, he insisted, which led to his mother and sister allegedly hitting him. Upset by this, the boy took his mother’s phone and dialed 112, informing the police about the matter.

The police personnel who received the call were surprised to hear the child crying and complaining. They consoled him over the phone and assured him that they would visit. Later, the officers went to his house, spoke to the family, and advised the mother not to hit the child. They also surprised the boy by giving him Kurkure packets, making him happy.

A video of this incident has gone viral on social media, with many praising the way the police handled the situation and comforted the young boy.

ಇದನ್ನೂ ಓದಿ:  Road Accident/ಸ್ಕೂಟಿ ಸವಾರನ ತಲೆಯ ಮೇಲೆ ಚಲಿಸಿದ ಬಸ್ ; ಸ್ಥಳದಲ್ಲೇ ಸಾವು