ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕುಮಟಾ ಉಪವಿಭಾಗದ ಸಹಾಯಕರ ಆಯುಕ್ತರನ್ನು (ಎ.ಸಿ) ಅವರನ್ನ ಅವರ ನಿವಾಸದಿಂದ ಕರೆತರಲು ಹೊರಟಿದ್ದ ಕಾರಿನ ಹಿಂಬದಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಕಾರಿನ ಹಿಂಬದಿಯ ಗಾಜು ಪುಡಿಪುಡಿಯಾಗಿರುವ ಘಟನೆ ನಡೆದಿದೆ.
ಎ.ಸಿ. ಅವರನ್ನು ಅವರನ್ನ ಬಂಗಲೆಯಿಂದ ಕರೆತರಲು ಕಾರು ತೆರಳುತ್ತಿದ್ದ ವೇಳೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಬಸ್ ಚಲಾಯಿಸಿಕೊಂಡು ಬಂದ ಶ್ರೀಕುಮಾರ ಬಸ್ ಎಸಿ ಅವರ ಕಾರಿನ ಹಿಂಬಂದಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಿಂದಾಗಿ ಕಾರ ಹಿಂಬದಿಯ ಗಾಜು ಸಂಪೂರ್ಣವಾಗಿ ಪುಡಿಪುಡಿಯಾಗಿದೆ. ಅದೃಷ್ಟವಶಾತ್, ಕಾರ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಸಮಾಜ,ಧಾರ್ಮಿಕ ಸಂಘಟನೆಗಾಗಿ ಡಾ. ಡಾ. ವೆಂಕಟೇಶ ನಾಯ್ಕ ನೇಮಕ: ಬೃಹ್ಮಾನಂದ ಸರಸ್ವತೀ ಮಹಾಸ್ವಾಮಿ