ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ : ಕಳೆದ ಎರಡು ದಶಕಗಳಿಗು ಅಧಿಕ ಸಮಯ ವ್ಯಕ್ತಿ ನಿಷ್ಠೆಯಿಂದ ಹೆಬ್ಬಾರ್ ನೆರಳಲ್ಲೆ ಬೆಳೆದು ಹೆಬ್ಬಾರ್ ಅವರ ಮೇಲಿನ ಪ್ರೀತಿ ಮತ್ತು ಭಕ್ತಿಯಿಂದ ಅವರು ಯಾವುದೇ ಪಕ್ಷದಲ್ಲಿದ್ದರು ಹಗಲು ರಾತ್ರಿ ಎನ್ನದೆ ಬ್ಯಾನರ್ ಬಂಟಿಂಗ್ಸ್ ಕಟ್ಟಿದ ಮಂಜುನಾಥ ನಗರ ವಾರ್ಡ್‌ನ ಹಾಲಿ ಪಟ್ಟಣ ಪಂಚಾಯತ್ ಸದಸ್ಯ ಸತೀಶ್ ಶಿವಾನಂದ ನಾಯ್ಕ್ ಅವರಿಗೆ ಯಲ್ಲಾಪುರ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿ ಕೆಪಿಸಿಸಿ ಆದೇಶಿಸಿದೆ.

ಸತೀಶ್ ಶಿವಾನಂದ ನಾಯ್ಕ್ ಮೂಲತಃ ಯಲ್ಲಾಪುರ ಮಂಜುನಾಥ ನಗರ ಮೂಲ ನಿವಾಸಿಗಳಾಗಿದ್ದು ಬಾಲ್ಯದಿಂದಲೂ ಸಮಾಜ ಸೇವೆಯಲ್ಲಿ ಉತ್ಸುಕತೆಯಿಂದ ಬೆಳೆಯುತ್ತಾ ಬಂದರು,ಅಪಾರ ಜನಸ್ನೇಹಗಳಿಸಿರುವ ಇವರು ಆಪತ್ಕಾಲದಲ್ಲಿ ಎಂತಹದೇ ಸಮಸ್ಯೆಗಳಿದ್ದರು ಸಹಾಯಕ್ಕೆ ಧಾವಿಸಿ ತನ್ನ ಕೈಲಾದ ಸೇವೆ ಸಲ್ಲಿಸುವ ಉತ್ಸಾಹಿಗಳು, ಕಲೆ ಸಾಹಿತ್ಯ ಇನ್ನಿತರ ಸಾಂಸ್ಕೃತಿಕ ವೇದಿಕೆಗಳನ್ನು ಸೃಷ್ಟಿಸಿ ಅನೇಕ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಎಂತಹದೆ ಸಂದಿಗ್ದ ಸಂದರ್ಭದಲ್ಲಿಯು ಸಹ ಶಾಸಕ ಹೆಬ್ಬಾರ್ ಹಾಕಿದ ಗೆರೆ ದಾಟದ ಅಪ್ಪಟ ಅಭಿಮಾನಿ,
ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಮಂಜುನಾಥ ನಗರದಿಂದ ಸ್ಪರ್ಧಿಸಿ ಗೆದ್ದ ನಂತರ ಅಧ್ಯಕ್ಷ ಪಟ್ಟ ಸಿಗುವ ಅವಕಾಶವಿದ್ದರು ಹೆಬ್ಬಾರ್ ಅವರ ಅಣತಿಯಂತೆ ಪಟ್ಟದಿಂದ ದೂರವೆ ಇದ್ದು ಸ್ವಾಮಿ ನಿಷ್ಟೆ ತೋರಿಸಿದ್ದು ಸದ್ಯ ಯಲ್ಲಾಪುರ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸ್ಥಾನ ನೀಡಿದ್ದು ಅತ್ಯಂತ ಪ್ರಮುಖ ಜವಾಬ್ದಾರಿ ನೀಡಿದ್ದಾರೆ.

ಶೀಘ್ರದಲ್ಲಿ ಪಟ್ಟಣ ಪಂಚಾಯತ್ ಅವಧಿ ಪೂರ್ಣಗೊಂಡು ಚುನಾವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ ನಗರ ಘಟಕದ ಅಧ್ಯಕ್ಷ ಸ್ಥಾನ ಬಹಳ ಮಹತ್ತರವಾದ ಜವಾಬ್ದಾರಿ ಆಗಿದ್ದು ಹೇಗೆ ನಿಭಾಯಿಸಲಿರುವರೆಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಎರಡು ದಶಕಕ್ಕೂ ಅಧಿಕ ಸಮಯದಿಂದ ಹೆಬ್ಬಾರ್ ಗರಡಿಯಲ್ಲಿ ಪಳಗಿದ ಯುವ ರಾಜಕಾರಣಿ ಬ್ಯಾನರ್ ಕಟ್ಟಲು ಸೈ ಈಗ ಪಕ್ಷ ಕಟ್ಟಲು ಸೈ ಎಂದಿದ್ದಾರೆ.ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನ ತಪ್ಪಿದ್ದ ಹಿನ್ನೆಲೆಯಲ್ಲಿ ಅಸಮದಾನಗೊಂಡಿದ್ದ ಸತೀಶ್ ನಾಯ್ಕ್ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತ ಆಪ್ತರು ಇದೀಗ ಪಕ್ಷ ನೀಡಿದ ಮಹತ್ತರವಾದ ಜವಾಬ್ದಾರಿಯಿಂದಾಗಿ ಸಂತಸಗೊಂಡಿದ್ದಾರೆ, ಅಲ್ಲದೆ ಇಂತಹ ಉನ್ನತ ಸ್ಥಾನ ನೀಡಿದ ಕೆ.ಪಿ.ಸಿ.ಸಿ ಪ್ರಮುಖರಿಗೆ ಶಾಸಕ ಹೆಬ್ಬಾರ್ ಅವರಿಗೆ, ಮಾಜಿ ಶಾಸಕ ವಿ.ಎಸ್.ಪಾಟೀಲ್ ಅವರಿಗೆ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಅವರಿಗೆ, ಪ್ರಮುಖರಾದ ವಿಜಯ್ ಮಿರಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ‌.ಎಸ್ ಭಟ್ ಅವರಿಗೆ ಹಾಗು ಪಕ್ಷದ ಎಲ್ಲಾ ಹಿರಿಯ ಪದಾಧಿಕಾರಿಗಳಿಗೆ ಅಭಿಮಾನಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ರಾಜಕಾರಣ ದಿಂದ ದೂರ ಸರಿದ “ಅನಂತ” ಅಸಂಖ್ಯಾತ ಕಾರ್ಯಕರ್ತ ರನ್ನ ನಡು ನೀರಿನಲ್ಲಿ ಕೈ ಬಿಟ್ಟು ರಾಜಕೀಯ ಸನ್ಯಾಸ ಪಡೆದ “ಕಟ್ಟರ್ ಹಿಂದೂತ್ವವಾದಿ”…!!!