ಸುದ್ದಿಬಿಂದು ಬ್ಯೂರೋ ವರದಿ
ಕಲಬುರಗಿ: ಮಹಾರಾಷ್ಟ್ರದ ಉಜನಿ, ವೀರ ಅಣೆಕಟ್ಟಿನಿಂದ ನೀರು ಬಿಟ್ಟ ಪರಿಣಾಮವಾಗಿ ಭೀಮಾ ಮತ್ತು ಕೃಷ್ಣಾ ನದಿಗಳು ತುಂಬಿ ಹರಿಯುತ್ತಿವೆ. ಕಲಬುರಗಿ,(Kalaburagi), ಬೀದರ್,(Bidar), ವಿಜಯಪುರ,(Vijayapura), ಯಾದಗಿರಿ,(Yadgir,) ರಾಯಚೂರು(Raichur) ಜಿಲ್ಲೆಗಳಲ್ಲಿ ನೂರಾರು ಎಕರೆ ಬೆಳೆಗಳು ಜಲಾವೃತಗೊಂಡಿದ್ದು, ಮನೆಗಳು, ರಸ್ತೆಗಳು ಹಾನಿಗೊಳಗಾಗಿವೆ.

ಸಿಎಂ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ
ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಕಲಬುರಗಿಗೆ ಬಂದ ಸಿಎಂ ಸಿದ್ದರಾಮಯ್ಯ, ಅಲ್ಲಿಂದ ಹೆಲಿಕಾಪ್ಟರ್ ಏರಿ ಎರಡು ಗಂಟೆಗಳ ಕಾಲ ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಿಸಿದರು. ಸಚಿವರು ಈಶ್ವರ್ ಖಂಡ್ರೆ, ಪ್ರಿಯಾಂಕಾ ಖರ್ಗೆ, ಕೃಷ್ಣ ಬೈರೇಗೌಡ, ಡಾ. ಶರಣ ಪ್ರಕಾಶ್ ಪಾಟೀಲ್ ಸಹ ಸಾಥ್ ನೀಡಿದರು.

ಅಧಿಕಾರಿಗಳೊಂದಿಗೆ ತುರ್ತು ಸಭೆ
ವೈಮಾನಿಕ ಸಮೀಕ್ಷೆ ಬಳಿಕ ಕಲಬುರಗಿಯಲ್ಲಿ ನಡೆದ ಸಭೆಯಲ್ಲಿ ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಇಲಾಖಾಧಿಕಾರಿಗಳಿಂದ ಪರಿಸ್ಥಿತಿ ವರದಿ ಪಡೆದ ಸಿಎಂ, ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.

ಪರಿಹಾರ ಹಣ ಬಿಡುಗಡೆ ಸೂಚನೆ : ಪ್ರವಾಹ ಸಂತ್ರಸ್ತರಿಗೆ ತಕ್ಷಣ ಪರಿಹಾರ ಹಣ ಹಾಗೂ ಮನೆ ಕಳೆದುಕೊಂಡವರಿಗೆ ಗೃಹ ನಿರ್ಮಾಣ ನೆರವು ನೀಡುವಂತೆ ಆದೇಶಿಸಿದರು. ಜಲಾವೃತ ಹಳ್ಳಿಗಳ ಜನರನ್ನು ಸುರಕ್ಷಿತ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿ ಆಹಾರ, ಕುಡಿಯುವ ನೀರು, ವೈದ್ಯಕೀಯ ನೆರವು ಒದಗಿಸಬೇಕೆಂದು ತಿಳಿಸಿದರು.

“ಪ್ರಾಣ ಹಾನಿಯಾಗದಂತೆ ಎಚ್ಚರ ವಹಿಸಿ
“ಯಾವುದೇ ರೀತಿಯ ಜೀವಹಾನಿ ಸಂಭವಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪರಿಹಾರ ಕಾರ್ಯಗಳಲ್ಲಿ ವಿಳಂಬವಾಗಬಾರದು,” ಎಂದು ಸಿಎಂ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆಯಲ್ಲಿ ಸಚಿವರು–ಜನಪ್ರತಿನಿಧಿಗಳ ಹಾಜರಿ
ಸಭೆಯಲ್ಲಿ ಸಚಿವರಾದ ಎಂಬಿ ಪಾಟೀಲ್, ಚಲುವರಾಯಸ್ವಾಮಿ, ಭೈರತಿ ಸುರೇಶ್, ಕಲ್ಯಾಣ ಕರ್ನಾಟಕ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಹಾಗೂ ಅನೇಕ ಶಾಸಕರು ಉಪಸ್ಥಿತರಿದ್ದರು.

Kalaburagi Floods: CM Conducts Aerial Survey, Orders Immediate Relief Measures

Kalaburagi: Following heavy inflow from Maharashtra’s Ujani and Veer reservoirs, the Bhima and Krishna rivers are overflowing, submerging hundreds of acres of crops in Kalaburagi, Bidar, Vijayapura, Yadgir, and Raichur districts. Several houses and roads have also been damaged due to the floods.

CM’s Aerial Survey
Chief Minister Siddaramaiah arrived in Kalaburagi by a special flight from Bengaluru and conducted a two-hour aerial survey of the flood-affected areas in a helicopter. He was accompanied by ministers Eshwar Khandre, Priyanka Kharge, Krishna Byregowda, and Dr. Sharan Prakash Patil.

Emergency Meeting with Officials
After the survey, the CM chaired an emergency meeting in Kalaburagi with deputy commissioners and senior department officials of four districts, reviewing the situation and directing immediate action.

Relief and Rehabilitation Orders
The Chief Minister instructed officials to release relief funds without delay and provide housing assistance to families who lost their homes. He also ordered safe relocation of villagers from submerged areas to care centers with adequate supply of food, drinking water, and medical support.

“Ensure No Loss of Lives”
“Strict precautions must be taken to prevent any loss of human lives. Relief operations should not be delayed under any circumstances,” Siddaramaiah stressed.

Leaders in Attendance
Ministers M.B. Patil, Chaluvarayaswamy, Byrathi Suresh, Kalyana Karnataka Development Board Chairman Dr. Ajay Singh, and several MLAs attended the review meeting.

ಇದನ್ನ ಓದಿ: ಉತ್ತರ ಕನ್ನಡದ ಗೌರವ ಹೆಚ್ಚಿಸಿದ ಮಂಜುನಾಥ ನಾಗೇಂದ್ರ ಗೌಡಪ್ಪ