ಮುಂಡಗೋಡ: ಖ್ಯಾತ ಯೂಟ್ಯೂಬರ್ ಖಾಜಾ ಅಲಿಯಾಸ್ ಮುಕಳೆಪ್ಪ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಇಂದು ಮುಂಡಗೋಡಕ್ಕೆ ಆಗಮಿಸಿ  ಪ್ರತಿಭಟನೆ ನಡೆಸಿದರು.

ಮುಕಳೆಪ್ಪನ ವಿವಾಹ ಸಂಬಂಧಿಸಿ ಮುಂಡಗೋಡ ನೋಂದಣಿ ಕಚೇರಿಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಮದುವೆ ಆಗಿರುವದಾಗಿ ಪ್ರಮೋದ ಮುತಾಲಿಕ್ ಆರೋಪಿಸಿದರು. ಈ ಪ್ರಕರಣ ಸಂಬಂಧ  ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟಿಸಿದರು. ಲವ್ ಜಿಹಾದ್‌ ಪ್ರಕರಣವಳು ಹೆಚ್ಚಗುತ್ತಿದೆ. ಇದಕ್ಕೆ‌ ಕಡಿವಾಣ ಹಾಕುವ ಕೆಲಸವಾಗಬೇಕಿದೆ ಎಂದು ಗುಡುಗಿದರು. ಸುಳ್ಳು ದಾಖಲೆ ಸೃಷ್ಟಿಸಿ ಮದುವೆ ನಡೆಸಲು ಯಾರಿಗೂ ಅವಕಾಶ ನೀಡಲಾಗಬಾರದು” ನಮ್ಮ ಸಂಸ್ಕೃತಿ ಕೆಡಿಸುವುದಲ್ಲದೆ ಅವರ ಜನಸಂಖ್ಯೆಯನ್ನ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ.

ಇದರ ವಿರುದ್ಧ ಎಲ್ಲಾ ಹಿಂದೂ ಸಂಘಟನೆಗಳು ಕೆಲಸ ಮಾಡುತ್ತಿದೆ. ನಮ್ಮ ಶ್ರೀರಾಮ ಸೇನೆ ಸಹಾಯವಾಣಿ ಕೇಂದ್ರವನ್ನ ತೆರೆದಿದೆ.ಯಾರಾದ್ರೂ ನಮ್ಮ‌ಹಿಂದೂ ಯುವತಿಯರಿಗೆ ತೊಂದರೆ ಕೊಡುವುದು ಮಾಡಿದರೆ ಯಾವುದೆ ಕ್ಷಣದಲ್ಲಿ ಸಹಾಯವಾಣಿಯನ್ನ ಸಂಪರ್ಕ ಮಾಡಬಹುದಾಗಿದೆ.ಎಂದಿದ್ದಾರೆ.ಇತ್ತೀಚಿನ ದಿನಗಳಲ್ಲಿ ಈ ಪ್ರಕರಣವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಮುಕಳೆಪ್ಪನ ವಿವಾಹ ಮತ್ತು ಅದರ ಹಿನ್ನಲೆ ಸಂಬಂಧಿಸಿದ ಆರೋಪಗಳು ಸಾರ್ವಜನಿಕರ ಗಮನವನ್ನು ಸೆಳೆದಿವೆ.ಪ್ರತಿಭಟನೆ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಬಿಗು ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.

Pramod Mutalik Leads Protest Over YouTuber Mukalappa’s Controversial Marriage
Mundagod: Prominent Hindu activist and Sri Ram Sena chief Pramod Mutalik today arrived in Mundagod to hold a protest concerning the ongoing “love jihad” controversy involving popular YouTuber Khaja alias Mukalappa.

Mutalik alleged that Mukalappa had conducted his marriage by creating false records at the Mundagod registration office. He demanded strict action against the incident, stating that such cases of “love jihad” are on the rise and need to be curbed. “No one should be allowed to conduct marriages using fraudulent documents. These actions not only harm our culture but also artificially increase certain populations,” he said.

He further stated that all Hindu organizations are actively working on this issue and that the Sri Ram Sena has also established a helpline. “Anyone who tries to harass our Hindu women can contact the helpline at any moment for assistance,” he added.

In recent days, the case has sparked widespread discussion on social media, drawing public attention to Mukalappa’s marriage and the surrounding allegations. In anticipation of the protest, authorities had deployed tight police security in the town.

ಇದನ್ನೂ ಓದಿ : ಕೆಡಿಸಿಸಿ ಬ್ಯಾಂಕ್ ಚುನಾವಣೆ ದಿನಾಂಕ ಘೋಷಣೆ