ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ : ತಾಲೂಕಿನ ಕಾನೂರು ಜಲಪಾತದಲ್ಲಿ ಜಾರಿ ಬಿದ್ದು ನೀರಿಗೆ ಕೊಚ್ಚಿಕೊಂಡು ಹೋಗಿದ್ದ ವಿದ್ಯಾರ್ಥಿಯ ಶವ ಬುಧವಾರ ಪತ್ತೆಯಾಗಿದೆ.

ಮೃತ ವ್ಯಕ್ತಿ ಧಾರವಾಡದ ಶ್ರೀನಗರ ನಿವಾಸಿಯಾಗಿದ್ದು, ಹಳಿಯಾಳದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದ ಸುಹೇಲ್ ಸಯ್ಯದ್ ಶೇಖ್ (21) ಎಂದು ಗುರುತಿಸಲಾಗಿದೆ.ಮಂಗಳವಾರ ಸುಹೇಲ್ ತನ್ನ ಸ್ನೇಹಿತರೊಂದಿಗೆ ಜಲಪಾತಕ್ಕೆ ಹೋಗಿದ್ದಾಗ, ಆಕಸ್ಮಿಕವಾಗಿ ಜಾರಿ ನೀರಿಗೆ ಬಿದ್ದು ಕಾಣೆಯಾಗಿದ್ದ.

ಘಟನೆಯ ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ತಕ್ಷಣವೇ ಹುಡುಕಾಟ ಕಾರ್ಯ ಆರಂಭಿಸಿದ್ದರು.ಆದರೆ ನಿನ್ನೆ ರಾತ್ರಿಯಾಗಿದ್ದ ಕಾರಣ ಕಾರ್ಯಚರಣೆ ಮುಂದುವರೆಸಲು ಸಾಧ್ಯವಾಗಿರಲಿಲ್ಲ.

ಇಂದು ಬೆಳ್ಳಿಗೆ ಕಾರ್ಯಚರಣೆ ನಡೆಸಿದ ಬಳಿ, ಸುಹೇಲ್ ಬಿದ್ದಿದ್ದ ಸ್ಥಳದಲ್ಲಿಯೇ ಅವನ ಶವವಾಗಿ ಪತ್ತೆಯಾಗಿದ್ದಾನೆ. ಈ‌ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: SL Bhyrappa/ ನಾಡಿನ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪರ ನಿಧನ