ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ತಾಲ್ಲೂಕು ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಹೊರಡಿಸಿದ ಆದೇಶ ಆಘಾತ ಮೂಡಿಸಿದೆ! ಒಟ್ಟೂ 17 ನರ್ಸ್‌ಗಳನ್ನು ಶಿರಾಲಿ ಸಿ.ಎಚ್.ಸಿ.ಗೆ ತುರ್ತು ವರ್ಗಾವಣೆ ಮಾಡಿದ ಪರಿಣಾಮ, ಈಗಾಗಲೇ ಗೊಂದಲದಿಂದ ಕಂಗೆಟ್ಟಿದ್ದ ಆಸ್ಪತ್ರೆ ಮತ್ತಷ್ಟು ಅಸ್ತವ್ಯಸ್ತಗೊಂಡಿದೆ.

ಖಾಯಂ 8 ಮತ್ತು ಎನ್‌ಆರ್‌ಎಚ್‌ಎಂ ಅಡಿಯಲ್ಲಿ 9 ಸೇರಿ 17 ನರ್ಸ್‌ಗಳನ್ನು ವಾರದಲ್ಲಿ 3–4 ದಿನ ಶಿರಾಲಿ, ಉಳಿದ ದಿನಗಳಲ್ಲಿ ಭಟ್ಕಳದಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ಆದೇಶ ಹೊರಡಿಸಲಾಗಿದೆ. ಇದರಿಂದ ಕುಟುಂಬ, ಆರೋಗ್ಯ, ಮಕ್ಕಳ ಶಿಕ್ಷಣದ ಹೊಣೆ ಹೊತ್ತಿರುವ ನರ್ಸ್‌ಗಳಿಗೆ ನಿಟ್ಟುಸಿರು ಬಿಗಿದಂತಾಗಿದೆ.

ಮ್ಯಾಟ್ರನ್ ವಿರುದ್ಧ ಆಕ್ರೋಶ ಜ್ವಾಲೆ!
ಈಗಾಗಲೇ ಪ್ರಭಾರಿ ಮ್ಯಾಟ್ರನ್ ವಿರುದ್ಧದ ಅಸಮಾಧಾನ ಉಂಟಾಗಿ, 19 ನರ್ಸ್‌ಗಳು ಸಹಿ ಹಾಕಿ ಅವರನ್ನು ಬದಲಾಯಿಸುವಂತೆ ಮನವಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಹಿಂದಿನ ಆಡಳಿತ ವೈದ್ಯಾಧಿಕಾರಿಗಳ ಪ್ರಭಾವದಲ್ಲಿ ನಿರ್ವಹಣೆ ನಡೆಯುತ್ತಿದೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದೆ..

ಔಷಧಿ ಪೂರೈಕೆ ಕುಸಿತ – ರೋಗಿಗಳು ಅಲೆದಾಡಿದ ಸ್ಥಿತಿ
ಆಸ್ಪತ್ರೆ ಕಲಹ ತಾರಕಕ್ಕೇರಿದಂತೆ, ಔಷಧಿ ಪೂರೈಕೆಯೇ ಸಾಕಷ್ಟು ಸಮಸ್ಯೆಗಳಾಗಿದೆ.. ಅಗತ್ಯ ಇಂಜಕ್ಷನ್‌ಗಳು ಹಾಗೂ ಔಷಧಿಗಳು ಸಮಯಕ್ಕೆ ಸಿಗದೇ, ಗರ್ಭಿಣಿಯರು, ವೃದ್ಧರು, ಶಸ್ತ್ರಚಿಕಿತ್ಸೆಗೆ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಕೆಲವರು ಪಕ್ಕದ ಖಾಸಗಿ ಆಸ್ಪತ್ರೆಗಳತ್ತ ಮುಖಮಾಡಬೇಕಾದ ಪರಿಸ್ಥಿತಿ ಭಟ್ಕಳದಲ್ಲಿ ನಿರ್ಮಾಣವಾಗಿದೆ. ಹಿಂದಿನ ವೈದ್ಯಾಧಿಕಾರಿ ವರ್ಗಾವಣೆಯ ವಿಚಾರದಲ್ಲಿ ಕಾನೂನು ಹೋರಾಟ ಆರಂಭಿಸಿದ್ದು, ಇನ್ನೂ ಆಸ್ಪತ್ರೆಯ ಹಿಡಿತ ಕಾಪಾಡಿಕೊಳ್ಳಲು ಶಕ್ತಿ ಪ್ರಯೋಗಿಸುತ್ತಿದ್ದಾರೆ ಎಂಬ ಗುಸು ಗುಸು.

ಹಾಲಿ ವೈದ್ಯಾಧಿಕಾರಿ ಡಾ. ಅರುಣಕುಮಾರ ಎನ್.ಎ. ಆಡಳಿತ ಒತ್ತಡದಲ್ಲಿ ನರಳುತ್ತಿದ್ದು, ಇದರ ಹೊಡೆತಕ್ಕೆ ಸಾಮಾನ್ಯ ಜನರು ನಕರಯಾತನೆ ಅನುಭವಿಸುವಂತಾಗಿದೆ..
ವಾಟ್ಸಪ್ ಗ್ರೂಪಿಗೆ ನೇರ ಎಂಟ್ರಿ ಕೊಟ್ಟ DHO!
ನರ್ಸ್‌ಗಳ ವರ್ಗಾವಣೆ ಮತ್ತು ಮ್ಯಾಟ್ರನ್ ವಿಚಾರದಲ್ಲಿ ಆಸ್ಪತ್ರೆಯ ವಾಟ್ಸಪ್ ಗ್ರೂಪ್‌ವೇ ಜಿಲ್ಲೆಯ ಆರೋಗ್ಯಾಧಿಕಾರಿ ಡಾ. ನೀರಜ್ ಬಿ.ವಿ ಸ್ವತಃ ಗ್ರೂಪ್‌ಗೆ ಎಂಟ್ರಿ ನೀಡಿ ಎಚ್ಚರಿಕೆ ನೀಡಿರುವುದು ಸಿಬ್ಬಂದಿಗೆ ಶಾಕ್ ಕೊಟ್ಟಿದೆ.

ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರ ಕೊರತೆ ಎದುರಾಗಿದೆ. ಔಷಧಿ, ಇಂಜಕ್ಷನ್ ಸಿಗದೆ ಖಾಸಗಿ ಆಸ್ಪತ್ರೆಗೆ ಓಡಬೇಕಾದ ಪರಿಸ್ಥಿತಿ ಬಂದಿದೆ, ಆಸ್ಪತ್ರೆಯಲ್ಲಿ, ಹೆರಿಗೆ ಡಾಕ್ಟರ್ ಇಲ್ಲದೆ ಸರಿ ಸುಮಾರು ಆರು ತಿಂಗಳ ಕಳೆದಿದೆ.ತಾಲೂಕ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರು ಇದ್ದಾರೆ ಸ್ತ್ರೀರೋಗ ತಜ್ಞರು ಇಲ್ಲ ಶಿರಾಲಯ ಕೋಟಿಬಾಗಿಲು ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರು ಇದ್ದಾರೆ. ಅರವಳಿಕೆ ಡಾಕ್ಟರ್ ಇಲ್ಲ….. ಬಡ ರೋಗಿಗಳ ಕಥೆ ಏನಾಗ್ಬೇಡ.. ಶಾಸಕರು, ಸಚಿವರು ಕೂಡಲೇ ಅಧಿಕಾರಿಗಳಿಗೆ ಸಲಹೆ ಸೂಚನೆಯನ್ನು ನೀಡಿ ಭಟ್ಕಳ ತಾಲೂಕ ಆಸ್ಪತ್ರೆಗೆ ಶ್ರೀ ರೋಗ ತಜ್ಞರು ನೇಮಿಸಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಸಾರ್ವಜನಿಕರು ಮನವಿ‌‌‌ ಮಾಡಿದ್ದಾರೆ. ತುರ್ತು ವರ್ಗಾವಣೆ ಆದೇಶ ಸಾರ್ವಜನಿಕ ಆರೋಗ್ಯ ಸೇವೆಯನ್ನು ಕುಸಿಯುವ ಹಂತಕ್ಕೆ ಬಂದಿದೆ.

ಇದನ್ನೂ ಓದಿ : ಗಣೇಶ ಮೆರವಣಿಗೆ ವೇಳೆ ಗಲಾಟೆ: ಕಲ್ಲು ತೂರಾಟ, ಲಾಠಿ ಚಾರ್ಜ್