ಸುದ್ದಿ‌ಬಿಂದು ಬ್ಯೂರೋ ವರದಿ
ಮಂಡ್ಯ: ಮದ್ದೂರಿನಲ್ಲಿ ಗಣೇಶನ ಮೆರವಣಿಗೆಯ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಕಲ್ಲು ತೂರಾಟ ಹಾಗೂ ಗಲಾಟೆ ನಡೆದಿರುವ ಘಟನೆ ನಡೆದಿದೆ.

ಗಣೇಶನ ಮೆರವಣಿಗೆ ಸಾಗುತ್ತಿರುವ ವೇಳೆ ಆಕಸ್ಮಿಕವಾಗಿ ಕೆಲ ದುಷ್ಕರ್ಮಿಗಳಿಂದ ಮೆರವಣಿಗೆ ಮೇಲೂ ಹಾಗೂ ಸಮೀಪದ ಮಸೀದಿ ಮೇಲೂ ಕಲ್ಲು ತೂರಾಟ ನಡೆದಿದ್ದು, ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಪರಿಸ್ಥಿತಿ ನಿಯಂತ್ರಣ ತಪ್ಪುವ ಸಾಧ್ಯತೆ ಕಂಡ ಬಂದ ಹಿನ್ನಲೆಯಲ್ಲಿ ಪೊಲೀಸರು ತಕ್ಷಣವೇ ಲಾಠಿ ಚಾರ್ಜ್ ನಡೆಸಿ, ಗಲಾಟೆ ಸೃಷ್ಟಿಸಿದವರನ್ನು ಚದುರಿಸಿದರು. ಲಾಠಿ ಹಿಡಿದು ಯುವಕರನ್ನು ಓಡಿಸಿದ್ದಾರೆ.‌ ಸದ್ಯ ಪರಿಸ್ಥಿತಿ ಶಾಂತವಾಗಿದೆ.

ಘಟನೆಯಿಂದಾಗಿ ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮುಂದಿನ ಅನಾಹುತ ತಪ್ಪಿಸಲು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಸ್ಟಾಫ್ ನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ