ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಆಸ್ಪತ್ರೆ ಸಮಸ್ಯೆ ಬಗ್ಗೆ ಪತ್ರಕರ್ತೆ ರಾಧಾಹಿರೇಗೌಡರ್ ಪ್ರಶ್ನೆಗೆ ಕಾಂಗ್ರೆಸ್ ಶಾಸಕ ವಿವಾದಾತ್ಮಕ ಹೇಳಿಕೆ ನೀಡಿರುವ ಕುರಿತು ಬಿಜೆಪಿ ವಕ್ತಾರ ವಿಜಯ್ ಪ್ರಸಾದ್,ಪ್ರತಿಕ್ರಿಯಿಸಿದ್ದು, ಈ ಹೇಳಿಕೆಗಖು ಕಾಂಗ್ರೆಸ್‌ನ ಕಿಳುಮಟ್ಟದ ಮನಸ್ಥಿತಿ ಮತ್ತು ನೈತಿಕ ದಿವಾಳಿತನಕ್ಕೆ ಪುರಾವೆ” ಎಂದು ಟೀಕಿಸಿದ್ದಾರೆ.
ಗ್ಯಾರಂಟಿ ನ್ಯೂಸ್‌ನ ಸಂಪಾದಕಿಯಾಗಿರುವ ರಾಧ ಹಿರೇಗೌಡರ್ (Guarantee News Radha Hiregoudar) ಅವರು ಉತ್ತರಕನ್ನಡ ಜಿಲ್ಲೆಯಲ್ಲಿ ಇನ್ನೂ ಸೂಫರ್ ಸ್ಪೇಷಾಲಿಟಿ ಆಸ್ಪತ್ರೆ ಆಗಿಲ್ಲ, ಅದು ಇರಲಿ ಒಂದು ಹೆರಿಗೆ ಆಸ್ಪತ್ರೆ ಕೂಡ ಸರಿಯಾಗಿಲ್ಲ ಇಲ್ಲ.. ನಿಮ್ಮ ಅವಧಿಯಲ್ಲಾದ್ರೂ ಜಿಲ್ಲೆಯಲ್ಲಿ ಸೂಫರ್ ಸ್ಪೇಷಾಲಿಟಿ ಆಸ್ಪತ್ರೆ ಆಗಬಹುದು ಅಂತಾ ಜನ ನಿರೀಕ್ಷೆ ಮಾಡಬಹುದೇ, ಅಂತಾ ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಅವರನ್ನ ಪ್ರಶ್ನೆ ಮಾಡಿದ್ದರು. ಇದಕ್ಕೆ ಶಾಸಕ ದೇಶಪಾಂಡೆ ಅವರು ನಿನ್ನಗೆ ಹೆರಿಗೆ ಮಾಡಸ್ತೀನಿ ಎಂದು ಹೇಳಿಕೆ ನೀಡಿದ್ದರು, ಅವರ ಆ ಒಂದು ಹೇಳಿಕೆ ಇದೀಗ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಕೂಡ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ವಕ್ತಾರ ವಿಜಯ್ ಪ್ರಸಾದ್ ದೇಶಪಾಂಡೆ ಅವರ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.
“ತಾಯಂದಿರು ಮತ್ತು ಮಹಿಳೆಯರನ್ನು ಅವಮಾನಿಸುವುದು ರಾಜಕೀಯವಲ್ಲ, ಅದು ನೈತಿಕ ದಿವಾಳಿತನ. ರಾಹುಲ್ ಗಾಂಧಿ ಪ್ರೀತಿ ಮತ್ತು ಗೌರವದ ಬಗ್ಗೆ ಮಾತನಾಡುತ್ತಾರೆ ಆದರೆ ಅವರ ನಾಯಕರು ದ್ವೇಷವನ್ನು ಹರಡುತ್ತಾರೆ. ಕಾಂಗ್ರೆಸ್‌ನ ರಾಜಕೀಯ ಅವಮಾನ, ನಿಂದನೆ ಮತ್ತು ಕುಟುಂಬ ದಾಳಿಗಳ ಬಗ್ಗೆ ಮಾತ್ರ. ಅವರು ಇಂದು ಮಾತನಾಡುತ್ತಾರೆ, ನಾಳೆ ನಿರಾಕರಿಸುತ್ತಾರೆ, ಮತ್ತೆ ಮುಂದಿನ ವಾರ ಪುನರಾವರ್ತಿಸುತ್ತಾರೆ. ಈ ದ್ವಂದ್ವವನ್ನು ಜನರ ಮುಂದಿಡಬೇಕಾಗಿದೆ,” ಎಂದು ಬಿಜೆಪಿ ವಕ್ತಾರ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜನರು ಅನೇಕ ವರ್ಷಗಳಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಆಗ್ರಹಿಸುತ್ತಿದ್ದಾರೆ. ಜಿಲ್ಲೆಯಲ್ಲೇ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಗಳು ಲಭ್ಯವಿಲ್ಲದ ಕಾರಣ ಗಂಭೀರ ಶಸ್ತ್ರಚಿಕಿತ್ಸೆಗಳು ಸೇರಿದಂತೆ ಸಣ್ಣಪುಟ್ಟ ಚಿಕಿತ್ಸೆಗೂ ಮಂಗಳೂರು, ಉಡುಪಿ ಮತ್ತು ನೆರೆಯ ಜಿಲ್ಲೆಗಳಿಗೆ ತೆರಳುವ ಪರಿಸ್ಥಿತಿ ಇದೆ.
ಕೆಲವು ವರ್ಷಗಳ ಹಿಂದೆ ಈ ಬಗ್ಗೆ ಜನರ ಒತ್ತಡ ಹೆಚ್ಚಾಗಿತ್ತು #NoHospitalNoVote ಎಂಬ ಹ್ಯಾಷ್‌ಟ್ಯಾಗ್‌ನಡಿ ಸಾಮಾಜಿಕ ಮಾಧ್ಯಮ ಅಭಿಯಾನವೂ ನಡೆದಿತ್ತು. ಆದರೂ ಇಂದಿಗೂ ಬೇಡಿಕೆ ಈಡೇರಿಲ್ಲ. ಸ್ಥಳೀಯರು ತುರ್ತು ಪರಿಸ್ಥಿತಿಗಳಲ್ಲಿ ಉನ್ನತ ಮಟ್ಟದ ಚಿಕಿತ್ಸೆ ಲಭ್ಯವಾಗದಿರುವುದರಿಂದ ದೊಡ್ಡ ಮಟ್ಟದ ಆಸ್ಪತ್ರೆ ಸ್ಥಾಪನೆ ಅತ್ಯಂತ ಅಗತ್ಯ ಎಂದು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಿದರೆ ಕಾಂಗ್ರೇಸ್ ಶಾಸಕರು ಓರ್ವ ಮಹಿಳಾ ಪತ್ರಕರ್ತೆಯನ್ನ ಅವಮಾನಿಸಿರುವುದು ಖಂಡನೀಯ ಎಂದಿದ್ದಾರೆ.