ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ನಗರದ ಹೆದ್ದಾರಿಯಲ್ಲಿರುವ ಸುರಂಗ ಮಾರ್ಗದಲ್ಲಿ ತಡರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.

ಗೋವಾಕಡೆಯಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಅಲ್ಟೋ ಕಾರ ಚಾಲಕ ಎದುರಿಗೆ ಇದ್ದ ಇನ್ನೊಂದು ವಾಹನವನ್ನು ಓವರ್ ಟೆಕ್ ಮಾಡಲು ಪ್ರಯತ್ನಿಸಿದ್ದ ಎನ್ನಲಾಗಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಕಾರು ಚಲಾಯಿಸುತ್ತಿದ್ದ ಪುತ್ತೂರು ಮೂಲದ ರಂಜಿತ್ ವಿಶ್ವನಾಥ ನಾಯ್ಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತ ವ್ಯಕ್ತಿ ಗೋವಾ ಕಡೆಯಿಂದ ಪುತ್ತೂರಿನತ್ತ ಪ್ರಯಾಣಿಸುತ್ತಿದ್ದ. ಅಪಘಾತ ತಡರಾತ್ರಿ ಸುಮಾರು 2.30ರ ಸಮಯದಲ್ಲಿ ಕಾರವಾರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಇದನ್ನೂ ಓದಿ:ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಬಂಧಿಸಿದ ಕದ್ರಾ ಪೊಲೀಸರು