ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕುರಿತಾಗಿ ಕೇಳಲಾದ ಪ್ರಶ್ನೆಗೆ, ಹಿರಿಯ ರಾಜಕಾರಣಿ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಅವರು ಉಡಾಫೆ ಉತ್ತರ ನೀಡಿದ್ದು, ಆಸ್ಪತ್ರೆ ಕುರಿತಾಗಿ ಹಿರಿಯ ಮಹಿಳಾ ಪತ್ರಕರ್ತೆ ಪ್ರಶ್ನೆಗೆ ಶಾಸಕರು ‘ನಿಮ್ಮದೇನಾದ್ರೂ ಹೆರಿಗೆ’ ಇದ್ದರೆ ಮಾಡಸ್ತಿನಿ ಎನ್ನುವ ಹೇಳಿಕೆ ನೀಡಿದ್ದಾರೆ, ಅವರ ಈ ಹೇಳಿಕೆ ಇದೀಗ ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಸೂಪಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಗ್ಯಾರಂಟಿ ನ್ಯೂಸ್ ಪ್ರಧಾನ ಸಂಪಾದಕಿ ರಾಧಾ ಹಿರೇಗೌಡರ್ ಸರ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಾಗ ಆಗಲಿದೆ ಅಂತಾ ನೇರಾ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಆಸ್ಪತ್ರೆ ನಿರ್ಮಾಣವಾಗುವ ಬಗ್ಗೆ ಮಾತ್ನಾಡೋದನ್ನ ಬಿಟ್ಟು
ಓರ್ವ ಮಹಿಳಾ ಪತ್ರಕರ್ತೆಗೆ ಸಾರ್ವಜನಿಕವಾಗಿ “ನಿಮ್ಮದೇನಾದ್ರೂ ಹೆರಿಗೆ ಇದ್ದರೆ ಮಾಡಸ್ತೀನಿ” ಎನ್ನುವ ಹೇಳಿಕೆ ನೀಡಿ ಅವಮಾನಿಸಿದ್ದಾರೆ.ಪತ್ರಕರ್ತೆಯಾಗಿ ರಾಧಾ ಹಿರೇಗೌಡ ಅವರು ಆಡಳಿತ ಪಕ್ಷದ ಹಿರಿಯ ಶಾಸಕರನ್ನ ಪ್ರಶ್ನೆ ಮಾಡಿದ್ದೆ ತಪ್ಪಾ ಎಂದು ಜಿಲ್ಲೆಯ ಜನ ಪ್ರಶ್ನೆ ಮಾಡತ್ತಿದ್ದಾರೆ. ಅಷ್ಟೆ ಅಲ್ಲದೆ ಹಿರಿಯ ರಾಜಕಾರಣಿಯಾಗಿ ಶಾಸಕರು ಈ ರೀತಿ ಮಾತನಾಡಿರುವುದಕ್ಕೆ ಶಾಸಕರು ಕ್ಷಮೆ ಕೇಳಬೇಕು ಅಂತಾ ಮಹಿಳಾ ಸಂಘಟನೆಯವರು ಕೂಡ ಆಗ್ರಹಿಸುತ್ತಿದ್ದಾರೆ.
“ಆಸ್ಪತ್ರೆ ಬೇಕು ಅಂತಾ ಪ್ರಶ್ನೆ ಕೇಳಿದಕ್ಕೆ ಇಂತಹ ಅವಮಾನಕಾರಿ ಉತ್ತರ ನೀಡಿರುವ ಬಗ್ಗೆ ಶಾಸಕರ ಹೇಳಿಕೆ ವಿರುದ್ಧ ಅಸಮಾಧಾನದ ಮಾತು ಕೇಳಿ ಬರಲಾರಂಭಿಸಿದೆ. ಹಿರಿಯ ಪತ್ರಕರ್ತೆಯೊಬ್ಬರನ್ನು ಸಾರ್ವಜನಿಕವಾಗಿ ಅವಮಾನಿಸಿದ ಶಾಸಕ ದೇಶಪಾಂಡೆ ಅವರ ಹೇಳಿಕೆ ಇದೀಗ ರಾಜಕೀಯ ಹಾಗೂ ಪತ್ರಕರ್ತ ವಲಯದಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಸೂಸಜ್ಜಿತ ಆಸ್ಪತ್ರೆ ಇಲ್ಲದೆ. ಜಿಲ್ಲೆಯ ಜನ ಪರದಾಡುತ್ತಿದ್ದಾರೆ. ಅವರು ನ್ಯೂಸ್ ಚಾನಲ್‌ನಲ್ಲಿ ಲೈವ್ ಅವಕಾಶ ಸಿಕ್ಕಾಗೆಲ್ಲಾ ನನ್ನ ಜಿಲ್ಲೆ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಲೆ ಬಂದಿದ್ದಾರೆ. ಅಷ್ಟೆ ಅಲ್ಲ ಸೂಫರ್ ಸ್ಪೇಷಾಲಿ ಆಸ್ಪತ್ರೆ ಹೋರಾಟದ ವಿಚಾರದಲ್ಲಿ ರಾಧ ಹಿರೇಗೌಡರ್ ಕೂಡ ಆರಂಭದಿಂದಲ್ಲೂ ಕೈ ಜೋಡಿಸಿದ್ದಾರೆ. ಹೀಗಿರುವಾಗ ಜಿಲ್ಲೆಯ ಬಗ್ಗೆ ಅಪಾರ ಕಾಳಜಿ ಹೊಂದಿರುವ. ರಾಜ್ಯಮಟ್ಟದ ನ್ಯೂಸ್ ಚಾನಲ್‌ನ ಸಂಪಾದಕಿಯಾಗಿರುವ ರಾಧ ಹಿರೇಗೌಡರ್ ಅವರು
ಕಳೆದ ನಾಲ್ಕೈದು ದಶಕದಿಂದ ಜಿಲ್ಲೆಯನ್ನ ಆಳಿದ ಹಿರಿಯ ಶಾಸಕ ಹಾಗೂ ಈಗಲೂ ಸರಕಾರಲ್ಲೆ ಹಿಡಿತ ಇಟ್ಟುಕೊಂಡಿರುವ ಆರ್ ವಿ ದೇಶಪಾಂಡೆ ಅವರ ಬಳಿ ಜಿಲ್ಲೆಯಲ್ಲಿ ಆಸ್ಪತ್ರೆ ಆಗ ಬೇಕು ಎನ್ನುವ ಉದ್ದೇಶದಿಂದ ಈ ಪ್ರಶ್ನೆ ಕೇಳಿದರೆ ಉಡಾಫೆ ಉತ್ತರ ನೀಡುವುದು ಎಷ್ಟು ಸರಿ ಎಂದು ಜಿಲ್ಲೆಯ ಪ್ರಜ್ಞಾವಂತ ಜನ ಈಗ ಪ್ರಶ್ನೆ ಮಾಡತ್ತಿದ್ದಾರೆ.
ಇದನ್ನೂ ಓದಿ:ಭಟ್ಕಳದಲ್ಲಿ ಬೋಟ್ ದುರಂತ : ಅರಬ್ಬಿ ಸಮುದ್ರದಲ್ಲಿ 25ಮೀನುಗಾರರ ರಕ್ಷಣೆ