ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ : ಸಮುದ್ರದ‌ ಅಲೆಗೆ ಸಿಲುಕಿ ಮುಳುಗಡೆಯಾದ ಬೋಟ್‌ನಲ್ಲಿ ಸಿಲುಕಿಕೊಂಡಿದ್ದ 25 ಮೀನುಗಾರರನ್ನ ರಕ್ಷಣೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನೇತ್ರಾಣಿ ನಡುಗಡ್ಡೆ ಬಳಿ ನಡೆದಿದೆ.

ಭಟ್ಕಳದ ಅಣ್ಣಪ್ಪ ಮೊಗೇರ್ ಎಂಬುವವರಿಗೆ ಸೇರಿದ ಮಹಾ ಮುರುಡೇಶ್ವರ ಹೆಸರಿನ ಪರ್ಷಿಯನ್ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದು, ಈ ವೇಳೆ ಅರಬ್ಬಿ ಸಮುದ್ರದ ರಕ್ಕಸ ಅಲೆ ಬೋಟ್‌ಗೆ ಅಪ್ಪಳಿಸಿದ ಪರಿಣಾಮವಾಗಿ ಆಳ ಸಮುದ್ರದಲ್ಲೇ ಬೋಟ್ ಮುಳುಗಡೆಯಾಗಿದೆ‌. ಮುಳುಗಡೆಯಾಗ ಬೋಟ್ ನಲ್ಲಿ 25ಮೀನುಗಾರು ಸಹ ಸಮುದ್ರದಲ್ಲಿ ಮುಳುಗಡೆಯಾಗಿದ್ದರು.

ಅವಘಡದಲ್ಲಿ ಸಿಲುಕಿರುವುದನ್ನ ಗಮನಿಸಿದ ವೆಲ್ಲನ್ಕಿಣಿ ಮತ್ತು ಮಚ್ಚೆದುರ್ಗ ಎಂಬ ಎರಡು ಸ್ಥಳೀಯ ಬೋಟ್ ಗಳಿಂದ ಅಪಾಯಕ್ಕೆ ಸಿಲುಕಿಕೊಂಡಿದ್ದ 25 ಜನ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ. ಬೋಟ್ ಮುಳುಗಡೆಯಿಂದಾಗಿ ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿದೆ.ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

  1. ಇದನ್ನೂ ಓದಿ : ಅನ್ನ ಗಂಟಲಿಗೆ ಸಿಲುಕಿ ಯುವಕ ಸಾವು : ಕಾರವಾರದಲ್ಲಿ ನಡೆದ ಘಟನೆ