ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಭಾರೀ ಮಳೆ ಹಾಗೂ ಜಲಾಶಯದಿಂದ‌ ನೀರು ಬಿಡಲಾಗಿರುವ ಕಾರಣ ಎಲ್ಲಾ ಪ್ರಾಥಮಿಕ,‌ ಪ್ರೌಢಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ನೀಡಲಾಗಿದೆ.

ಭಾರೀ ಮಳೆ‌ಸುರಿಯುತ್ತಿರುವ ಕಾರಣ ಲಿಂಗನಮಕ್ಕಿ ಹಾಗೂ ಗೆರಸೊಪ್ಪಾ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನ ಶರಾವತಿ ನದಿಗೆ ಹರಿಬಿಡಲಾಗುತ್ತಿದೆ. ಇದರಿಂದಾಗಿ ನದಿ ತೀರದ ಬಹುತೇಕ ಗ್ರಾಮಗಳು ಜಲಾವೃತ್ತಗೊಂಡಿದ್ದು, ನಿರಂತರವಾಗಿ ನೀರು ಬಿಡಲಾಗುತ್ತಿರು ಕಾರಣ ಹೊನ್ನಾವರ ತಾಲೂಕಿನ ಎಲ್ಲಾ ಅಂಗನವಾಡಿ,ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ನೀಡಿ ಆದೇಶಿಸಲಾಗಿದೆ.

ಇದನ್ನೂ ಓದಿ: ಭಾಸ್ಕೇರಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ನೆರವಾದ ಕಾಂಗ್ರೇಸ್ ಮುಖಂಡ ಮಂಜುನಾಥ ಎಲ್. ನಾಯ್ಕ