ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಬೆಳ್ಳಂಬೆಳಿಗ್ಗೆ ಹೆಗಡೆಯಿಂದ ಕುಮಟಾಕ್ಕೆ ಹೊರಟಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚಹಾ ಅಂಗಡಿಗೆ ನುಗ್ಗಿ ಅಂಗಡಿ ಸಂಪೂರ್ಣವಾಗಿ ನುಜ್ಜುಗುಜ್ಜಾಗಿರುವ ಘಟನೆ ನಡೆದಿದೆ..
ಈ ಬಸ್ ಹೆಗಡೆಯಿಂದ ಕುಮಟಾ ಬಸ್ ನಿಲ್ದಾಣಕ್ಕೆ ಸಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಇಂಡಸ್ಟ್ರಿರ್ ಏರಿಯಾ ಸಮಿಪ ಬರುತ್ತಿದ್ದಂತೆ ಚಾನಲಕ ನಿಯಂತ್ರಣ ತಪ್ಪಿ ಹೆಗಡೆ ಕುಮಟಾ ರಸ್ತೆ ಬದಿಯಲ್ಲಿದ್ದ ನಾಗೇಶ ಗೌಡ ಎಂಬುವವರ ಚಹಾ ಅಂಗಡಿಗೆ ಇದಾಗಿತ್ತು ಎನ್ನಲಾಗಿದೆ. ಘಟನೆ ಸಂದರ್ಭದಲ್ಲಿ ಚಹಾ ಅಂಗಡಿ ಬಂದ್ ಆಗಿರುವ ಕಾರಣ ಪ್ರಾಣ ಹಾನಿ ನಡೆದಿಲ್ಲ. ಹಬ್ಬ ಹಿನ್ನಲೆಯಲ್ಲಿ ನಾಗೇಶ ಗೌಡ ಅಂಗಡಿ ಬಂದ್ ಮಾಡಿದ್ದರಿಂದಾಗಿ ಅನಾಹುತ ತಪ್ಪಿದಂತಾಗಿದೆ.