ಸುದ್ದಿಬಿಂದು ಬ್ಯೂರೋ ವರದಿ
ಮಂಗಳೂರು : ಅನನ್ಯಾ ಭಟ್ ನನ್ನ ಮಗಳು” ಎಂದು ಹೇಳಿ ಎಲ್ಲೆಡೆ ಸುದ್ದಿ ಮಾಡುತ್ತಿದ್ದ ಸುಜಾತಾ ಭಟ್ ಕೊನೆಗೂ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಚಾರಣೆಯಲ್ಲಿ ಸತ್ಯ ಬಹಿರಂಗಪಡಿಸಿದ್ದಾರೆ.

ದಾಖಲೆ ತೋರಿಸಲು ವಿಫಲ
ಎರಡು ದಿನಗಳ ವಿಚಾರಣೆಯಲ್ಲೂ ಅನನ್ಯಾ ಭಟ್‌ ತನ್ನ ಮಗಳು ಎಂದು ಯಾವುದೇ ದಾಖಲೆ ನೀಡಲು ಸುಜಾತಾ ಭಟ್ ವಿಫಲರಾದ್ದಾರೆನ್ನಲಾಗಿದೆ.

ಬುರುಡೆ ಗ್ಯಾಂಗ್‌ನ ಪಾತ್ರ ಬಯಲು
ವಿಚಾರಣೆ ವೇಳೆ ಸುಜಾತಾ ಭಟ್, “ಅನನ್ಯಾ ಭಟ್ ನನ್ನ ಮಗಳು ಅಲ್ಲ. ಬುರುಡೆ ಗ್ಯಾಂಗ್ ಹೇಳಿದಂತೆ ನಾನು ಕಥೆ ಹೇಳಿದ್ದೆ. ನನಗೆ ಹಿರಿಯರ ಆಸ್ತಿ ಬೇಕೆಂಬ ಕಾರಣದಿಂದ ಈ ಪಾತ್ರ ಸೃಷ್ಟಿಯಾಗಿತ್ತು” ಎಂದು ಒಪ್ಪಿಕೊಂಡಿದ್ದಾರೆ.

ದೀರ್ಘ ವಿಚಾರಣೆ
ಕರೆಯದೇ ಇದ್ದರೂ ಮಂಗಳವಾರ ಬೆಳಗ್ಗೆಲೇ ಎಸ್‌ಐಟಿ ಕಚೇರಿಗೆ ಹಾಜರಾದ ಸುಜಾತಾ ಅವರನ್ನು ಅಧಿಕಾರಿಗಳು 6ಗಂಟೆಗಳ ಕಾಲ ಪ್ರಶ್ನಿಸಿದರು. ಶಿವಮೊಗ್ಗ, ಉಡುಪಿ, ಕೊಡಗು ಸಂಪರ್ಕಗಳ ಬಗ್ಗೆ ಕೂಡ ವಿಚಾರಣೆ ನಡೆಸಲಾಗಿತ್ತು.

ಭಾವನಾತ್ಮಕ ಪ್ರತಿಕ್ರಿಯೆ
ಅಧಿಕಾರಿಗಳ ಮುಂದೆ ಸುಜಾತಾ ಕಣ್ಣೀರು ಹಾಕುತ್ತಾ, “ನನ್ನನ್ನು ಬಿಟ್ಟು ಬಿಡಿ. ಕೊಟ್ಟ ದೂರುವನ್ನು ವಾಪಸ್ ಪಡೆಯುತ್ತೇನೆ” ಎಂದು ಬೇಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಾಧ್ಯಮದ ಮುಂದೆ ಅಸಮಾಧಾನ
ರಾತ್ರಿ 10ಗಂಟೆ ವೇಳೆಗೆ ವಿಚಾರಣೆ ಮುಗಿಸಿ ಹೊರಬಂದಾಗ, ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸುಜಾತಾ ಭಟ್, “ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನೀವು ಮಾಡಿದ ಸಹಕಾರ ಸಾಕು. ನನ್ನನ್ನು  ಹಿಂಬಾಲಿಸುವ ಅಗತ್ಯವಿಲ್ಲ” ಎಂದು ಸಿಟ್ಟಿನಿಂದ ಹೇಳಿ ರಿಕ್ಷಾದಲ್ಲಿ ತೆರಳಿದ್ದಾರೆ.ಈ ಬೆಳವಣಿಗೆಯಿಂದ ಬುರುಡೆ ಗ್ಯಾಂಗ್‌ಗೆ ದೊಡ್ಡ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ರಸ್ತೆ ಬಿಟ್ಟು ಚಹಾ ಅಂಗಡಿಗೆ ಬಂದ ಬಸ್ : ಹೆಗಡೆ ರಸ್ತೆಯಲ್ಲಿ ಘಟನೆ