ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ಗಣೇಶ ಚತುರ್ಥಿಯ ಅಂಗವಾಗಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ವೈದ್ಯ ಅವರು ಇಂದು ಇಡಗುಂಜಿ ಶ್ರೀವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದು‌ ಪೂಜೆ ಸಲ್ಲಿಸಿದ್ದರು.

ಸಚಿವ ವೈದ್ಯ ಅವರು ಪುತ್ರಿ ಬೀನಾ ಜೊತೆ ದೇವರ ದರ್ಶನ ಪಡೆದು, ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯದ ಜನತೆಗೆ ಕಲ್ಯಾಣವಾಗಲೆಂದು ಶ್ರೀಗಣೇಶನಲ್ಲಿ ಪ್ರಾರ್ಥಿಸಿದರು.

ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ ಸಚಿವ ಮಂಕಾಳ ವೈದ್ಯರು, “ಶ್ರೀಗಣೇಶನ ಕೃಪೆಯಿಂದ ಎಲ್ಲರ ಜೀವನ ಸುಖ-ಶಾಂತಿಯುತವಾಗಿರಲಿ” ಎಂದು ಹಾರೈಸಿದರು..

ಇದನ್ನೂ ಓದಿ: ಬಾನು ಮುಷ್ತಾಕ್ ಅವರಿಂದ ದಸರಾ
ಉತ್ಸವ ಉದ್ಘಾಟನೆ ಸಮಂಜಸವಲ್ಲ : ಈಶ್ವರ ನಾಯ್ಕ ಖಂಡನೆ