ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ತಾಲೂಕಿನ ಜಾಲಿ ಕ್ರಾಸ್‌ ಬಳಿ ಆಕಸ್ಮಿಕ‌ ಬೆಂಕಿ ತಗುಲಿ,ಇಪ್ತಿಕಾರ್ ಮಾಲೀಕರಾದ “ತಾಸಿನ್ ಫ್ರೂಟ್ಸ್ & ವೆಜಿಟೇಬಲ್ಸ್” ಹೋಲ್‌ಸೇಲ್ ಅಂಗಡಿ ಭಸ್ಮವಾದ ಘಟನೆ ನಡೆದಿದೆ.

ಅಂಗಡಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬೆಂಕಿ ಅವಘಡದಿಂದಾಗಿ ಕ್ಷರ್ಣಾರ್ಧದಲ್ಲಿ ಅಂಗಡಿಯಲ್ಲಿದ್ದ  ಲಕ್ಷಾಂತರ ಮೌಲ್ಯದ ಹಣ್ಣು–ತರಕಾರಿ ಹಾಗೂ ಇತರ ಸಾಮಗ್ರಿಗಳು ಸುಟ್ಟು ಭಸ್ಮವಾಗಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಭಟ್ಕಳ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಸುಲಭವಾಗಿ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ ಬಳಿಕ ಹೊನ್ನಾವರ ಹಾಗೂ ಬೈಂದೂರಿನಿಂದ ಕೂಡ ಅಗ್ನಿಶಾಮಕ ವಾಹನಗಳು ಕರೆಸಲಾಯಿತ್ತು. ಅಗ್ನಿಶಾಮ ದಳದ‌ ಸಿಬ್ಬಂದಿ ಹಾಗೂ ಸ್ಥಳೀಯ ಶ್ರಮದಿಂದ ಗಂಟೆಗಳ ಬಳಿಕ ಬೆಂಕಿ ನಂದಿಸಲಾಗಿದೆ.

ಸ್ಥಳಕ್ಕೆ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವಘಡದಿಂದ ಅಂಗಡಿ ಮಾಲಿಕರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.

ಇದನ್ನೂ ಓದಿ: YouTuber/ಯೂಟ್ಯೂಬರ್ ಸಮೀರ್ ಹಿಂದಿದೆ‌ ಕಾಂಗ್ರೇಸ್‌‌ನ ಕಾಣದ ಕೈ : ರೂಪಾಲಿ ನಾಯ್ಕ ಆರೋಪ