ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಕಳೆದ 35 ವರ್ಷಗಳ ಹಿಂದೆ ದಿನಕರ್ ಶೆಟ್ಟಿ ಎಂಬಾತನಿಗೆ ಹೊಡೆದು ಹಲ್ಲೆ ಮಾಡಿ ಪೊಲೀಸರಿಂದ ತಲೆಮರೆಸಿಕೊಂಡು ದೆಹಲಿಯಲ್ಲಿ ವಾಸವಾಗಿದ್ದ ಆರೋಪಿಯನ್ನ ಇದೀಗ ಶಿರಸಿ ಪೊಲೀಸರು ದಾಂಡೇಲಿಯಲ್ಲಿ ಬಂಧಿಸಿದ್ದಾರೆ.
1990 ನವೆಂಬರ್ 29ರಂದು ಕುಮಟಾ ರಸ್ತೆಯ ಅಗಸೆಬಾಗಿಲು ಚರ್ಚ ಬಳಿ ಆರೋಪಿ ದೀಪಕ್ ವಿಠ್ಠಲ್ ಭಂಡಾರಿ ಎಂಬಾತ ದಿನಕರ ನಾರಾಯಣ ಶೆಟ್ಟಿ ಎಂಬುವವರ ಮೇಲೆ ಹಲ್ಲೆ ಮಾಡಿದ್ದ, ಈ ಬಗ್ಗೆ ನಾರಾಯಣ ನಾಗಪ್ಪ ಶೆಟ್ಟಿ ಎಂಬುವವರು ದೀಪಕ್ ಭಂಡಾರಿ ವಿರುದ್ಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಆತ ನ್ಯಾಯಾಲಯಕ್ಕೂ ಹಾಜರಾಗದೆ ನಾಪತ್ತೆಯಾಗಿದ್ದ,
ಆತನ ಬಂಧನಕ್ಕಾಗಿ ಪೊಲೀಸರು ತಂಡವೊಂದನ್ನ ರಚಿಸಿ ಮಂಗಳೂರು, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಶೋಧ ನಡೆಸಿದರೂ ದೀಪಕ್ ಪತ್ತೆಯಾಗಿರಲಿಲ್ಲ. ಇವತ್ತು ಆತ ದೆಹಲಿಯಿಂದ ವಾಪಸ್ ಆಗುವ ಬಗ್ಗೆ ಖಚಿತ ಮಾಹಿತಿ ತಿಳಿದ ಪೊಲೀಸರು ಆತನನ್ನ ಬಂಧಿಸಿದ್ದಾರೆ.
ಇದನ್ನೂ ಓದಿ:Fire in Bhatkal/ಭಟ್ಕಳದಲ್ಲಿ ಭಾರೀ ಬೆಂಕಿ ಅವಘಢ : ಕಾಲಕಿತ್ತು ಓಡಿದ ಜನ