ಸುದ್ದಿಬಿಂದು ಬ್ಯೂರೋ ವರದಿ
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಮುಸುಕು ಧರಿಸಿ ಎಂಟ್ರಿಯಾಗಿದ್ದ ಸಾಕ್ಷಿಧಾರ ಚೆನ್ನಯ್ಯನನ್ನು ಎಸ್‌ಐಟಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದ, ನ್ಯಾಯಾಲಯವು ಅನಾ’ಮಿಕ’ ಅಲಿಯಾಸ ಸಿಎನ್ ಚೆನ್ನಯ್ಯಗೆ ಹತ್ತುದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಆತನ ಅಸಲಿ ಮುಖವಾಡ ಬಯಲಾಗಿದೆ.

ಇಂದು ಬೆಳಿಗ್ಗೆ ಅನಾಮಿಕನಿಗೆ ಬಂಧಿಸಿದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿ ಚೆನ್ನಯ್ಯನನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಧರ್ಮಸ್ಥಳ ದೇವಸ್ಥಾನದ ವಿರುದ್ಧ ನಡೆದಿದ್ದ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾನೆಂಬ ಕಾರಣದಿಂದ ಎಸ್‌ಐಟಿ ಪೊಲೀಸರು ಅವನನ್ನು ವಶಕ್ಕೆ ಪಡೆಯಲು ಮನವಿ ಸಲ್ಲಿಸಿದರು.

ಪೊಲೀಸರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ, ಚೆನ್ನಯ್ಯನನ್ನು 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡುವಂತೆ ಆದೇಶ ಹೊರಡಿಸಿದೆ.

ಇದನ್ನೂ ಓದಿ:ಗಣೇಶ ಚತುರ್ಥಿಗೆ ವಿಶೇಷ ರೈಲು: ಬೆಂಗಳೂರಿನಿಂದ ಉತ್ತರ ಕನ್ನಡ ಕರಾವಳಿ ಭಾಗಕ್ಕೆ ಪ್ರಯಾಣ ಸುಲಭ