ಸುದ್ದಿಬಿಂದು ಬ್ಯೂರೋ ವರದಿ
ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿದ್ದೇನೆ ಎಂದು ಆತಂಕ ಹುಟ್ಟಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದ ಅನಾಮಿಕ ಅಲಿಯಾಸ್ ಭೀಮಾ ಅವರನ್ನು ಎಸ್‌ಐಟಿ ತಂಡ ಬಂಧಿಸಿದೆ.

ರಾತ್ರಿ ಹತ್ತು ಗಂಟೆಯವರೆಗೂ ಅನಾಮಿಕನಿಗೆ ತೀವ್ರ ವಿಚಾರಣೆ ನಡೆಸಿದ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ, ಅನೇಕ ಪ್ರಮುಖ ಮಾಹಿತಿಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆಯಿಂದಲೇ ವಿಚಾರಣೆಯಲ್ಲಿ ತೊಡಗಿದ್ದ ಎಸ್‌ಐಟಿ, ಇನ್ನೂ ಕೆಲವೇ ಕ್ಷಣಗಳಲ್ಲಿ ಅನಾಮಿಕನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವ ಸಿದ್ಧತೆ ನಡೆಸಿದೆ. ಜುಲೈ 2ರಂದು ಬುರುಡೆ ಜೊತೆಯಾಗಿ ಪ್ರತ್ಯಕ್ಷನಾದ ಅನಾಮಿಕ, ಅದೇ ಸಂದರ್ಭದಲ್ಲಿ ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಹೆಚ್ಚಿನ ತನಿಖೆ ಮುಂದುವರಿಯುತ್ತಿದ್ದು, ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಆತ ನೀಡಿದ ಮಾಹಿತಿಯ ನಿಖರತೆ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕೇಣಿ ಬಂದರು ಅಹವಾಲು ಸಭೆ : ರಾಜಕೀಯ ಮುಖಂಡರ ಹಪಾಹಪಿತನಕ್ಕೆ,ಡೊಂಗಿ