ಸುದ್ದಿಬಿಂದು ಬ್ಯೂರೋ ವರದಿ
ತಿರುವನಂತಪುರ: ಇತ್ತೀಚೆಗೆ ನಟಿ ಹಾಗೂ ಮಾಜಿ ಪತ್ರಕರ್ತೆ ರಿನಿ ಆನ್ ಜಾರ್ಜ್, “ಮೂರು ವರ್ಷಗಳ ಹಿಂದೆ ರಾಜಕಾರಣಿಯೊಬ್ಬರು ಆಕ್ಷೇಪಾರ್ಹ ಸಂದೇಶ ಕಳುಹಿಸಿ ಹೋಟೆಲ್ಗೆ ಆಹ್ವಾನಿಸಿದ್ದರು..ಈ ಆರೋಪದ ನಡವೆ ಇದೀಗ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪಾಲಕ್ಕಾಡ್ ಶಾಸಕ ರಾಹುಲ್ ಮಾಮ್ಕೂಟತ್ತಿಲ್ ಅವರು ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಬಿಜೆಪಿಯ ಯುವ ಘಟಕ ಪ್ರತಿಭಟನೆ ನಡೆಸಿ, ಈ ಆರೋಪ ರಾಹುಲ್ ವಿರುದ್ದವೇ ಎಂದು ದೂರಿತ್ತು. ನಂತರ ಮಲಯಾಳಂ ಬರಹಗಾರ್ತಿ ಹನಿ ಭಾಸ್ಕರನ್ ಕೂಡ ರಾಹುಲ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ಪ್ರಕರಣ ಮತ್ತಷ್ಟು ಗಂಭೀರಗೊಂಡಿತ್ತು
ಈ ಬೆಳವಣಿಗೆಗಳ ನಡುವೆ ಯುವ ಕಾಂಗ್ರೆಸ್ನೊಳಗೆ ತೀವ್ರ ಒತ್ತಡ ಹೆಚ್ಚಿ, ಹಲವಾರು ನಾಯಕರು ರಾಹುಲ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು. ಶಾಸಕ ಚಾಂಡಿ ಉಮ್ಮನ್ ಬೆಂಬಲಿಗರೂ ಸಹ ಪಕ್ಷದ ಹುದ್ದೆಗಳಿಂದ ಅವರನ್ನು ತೆಗೆದುಹಾಕಲು ಆಗ್ರಹಿಸಿದ್ದರು.
ಆರೋಪಗಳು ಗಂಭೀರವಾಗಿದ್ದರೂ, ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್, “ನಾನು ಯಾವುದೇ ಹುದ್ದೆಗೆ ರಾಜೀನಾಮೆ ನೀಡಿಲ್ಲ. ನನ್ನ ವಿರುದ್ಧ ಕೇಳಿಬರುತ್ತಿರುವ ಆರೋಪಗಳೆಲ್ಲ ಸುಳ್ಳು. ಕಾನೂನುಬಾಹಿರ ಅಥವಾ ಸಂವಿಧಾನಬಾಹಿರ ಕೆಲಸ ನಾನು ಮಾಡಿಲ್ಲ” ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ರಾಹುಲ್ ರಾಜೀನಾಮೆ ನೀಡಿರುವುದನ್ನು ಅಧಿಕೃತವಾಗಿ ಸ್ವೀಕರಿಸಿರುವುದು ಸ್ಪಷ್ಟವಿಲ್ಲ. ಆದರೆ, ಅವರು ಪಾಲಕ್ಕಾಡ್ನಿಂದ ಸ್ವತಂತ್ರ ಶಾಸಕರಾಗಿ ಮುಂದುವರಿಯುವ ಅವಕಾಶವಿದೆ. ಈ ನಡುವೆ ತೆರವಾದ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಅಬಿನ್ ವರ್ಗೀಸ್ ಹಾಗೂ ಕೆ.ಎಂ ಅಭಿಜಿತ್ ಅವರ ಹೆಸರನ್ನು ಪರಿಗಣಿಸಲಾಗುತ್ತಿದೆ.
ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್ ಪ್ರತಿಕ್ರಿಯಿಸಿ, “ಆರೋಪಗಳ ಕುರಿತು ಪಕ್ಷವು ಗಂಭೀರವಾಗಿ ಪರಿಶೀಲನೆ ನಡೆಸಲಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಗಮನಾರ್ಹವಾಗಿ, 2024ರ ಪಾಲಕ್ಕಾಡ್ ಉಪಚುನಾವಣೆಯಲ್ಲಿ ರಾಹುಲ್ 18,840 ಮತಗಳ ಅಂತರದಿಂದ ಗೆದ್ದಿದ್ದರು. ವಿದ್ಯಾರ್ಥಿ ರಾಜಕೀಯದಿಂದ ಬೆಳೆಯುತ್ತಾ, ನವೆಂಬರ್ 2023ರ ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ದಾಖಲೆಯ ಮತಗಳನ್ನು ಪಡೆದು ರಾಜ್ಯದ ಪ್ರಮುಖ ಯುವ ನಾಯಕನಾಗಿ ಹೊರಹೊಮ್ಮಿದ್ದರು.
ಇದನ್ನೂ ಓದಿ:ಸೌಜನ್ಯ ಹೋರಾಟಗಾರ ತಿಮರೋಡಿ ಪೊಲೀಸ್ ವಶಕ್ಕೆ : ಹೋರಾಟ ನಿಲ್ಲಿಸಲ್ಲ ಎಂದ ಶೆಟ್ಟಿ