Crime News
ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಕೇವಲ 200 ರೂಪಾಯಿ ಕೂಲಿ ಹಣ ನೀಡದ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಸಲಾಕೆಯಿಂದ ಹೊಡೆದು ಕೊಲೆ ಮಾಡಿದ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಮಾಟಗೇರಿಯಲ್ಲಿ ನಡೆದಿದೆ.
ಮೃತನನ್ನು ಕಮಾಟಗೇರಿ ಗ್ರಾಮದ ರವೀಶ ಗಣಪತಿ ಚನ್ನಯ್ಯ (40) ಎಂದು ಗುರುತಿಸಲಾಗಿದೆ. ಆರೋಪಿ ಅದೇ ಗ್ರಾಮದ ಮಂಜುನಾಥ ಬಸ್ಯಾ ಚನ್ನಯ್ಯ ಎಂದು ಗೊತ್ತಾಗಿದೆ..
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕೂಲಿ ಮೊತ್ತ 500 ರೂಪಾಯಿಗಳ ಪೈಕಿ 300 ರೂಪಾಯಿ ನೀಡಲಾಗಿತ್ತು. ಉಳಿದ 200 ರೂಪಾಯಿ ನೀಡದೇ ಸತಾಯಿಸುತ್ತಿದ್ದ ಕಾರಣ ಮಾತಿಗೆ ಮಾತು ಉಂಟಾಗಿದೆ ಎನ್ನಲಾಗಿದ್ದು,. ಈ ವೇಳೆ ಆರೋಪಿ ಸಲಾಕೆಯಿಂದ ರವೀಶನ ತಲೆಯ ಮೇಲೆ ಬಲವಾಗಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಆತ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಶಿರಸಿ ಡಿಎಸ್ಪಿ ಗೀತಾ ಪಾಟಿಲ್, ಸಿಪಿಐ ಶಶಿಕಾಂತ ವರ್ಮಾ ಹಾಗೂ ಪಿಎಸ್ಐ ಸಂತೋಷ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.