ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಶಾಸಕ ಸತೀಶ್ ಸೈಲ್ ಅವರ ಮನೆ ಮೇಲೆ ಇಡಿ ದಾಳಿಗೆ ಸಂಬಂಧಿಸಿ ಸಚಿವ ಮಂಕಾಳ್ ವೈದ್ಯ ಅವರು ಪ್ರತಿಕ್ರಿಯೆ ನೀಡಿದ್ದು, . “ಕೈ ಶಾಸಕರು, ಸಂಸದರ ಮನೆ ಮೇಲೆ ಇಡಿ ದಾಳಿ ನಡೆಯುವುದು ಇದೆ ಮೊದಲೇನಲ್ಲ.ಆದರೆ ಬಿಜೆಪಿಗೆ ಸೇರಿದರೆ ಅವರು ವಾಷಿಂಗ್ ಮಷಿನ್ ರೀತಿ ಕ್ಲೀನ್ ಆಗ್ತಾರೆ. ದೇಶದಲ್ಲಿ ಬಿಜೆಪಿ ಸೇರ್ಪಡೆ ಮಾಡಿಸಲು ಇಡಿಯನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ” ಎಂದು ವ್ಯಂಗ್ಯ ಮಾಡಿದ್ದಾರೆ.
ಬಿಜೆಪಿಗೆ ಶಾಸಕರ ಕೊರತೆ ಕಾರಣವಾಗಿರಬಹುದು
ಸಚಿವ ವೈದ್ಯರು, “ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಕಡಿಮೆ ಇದ್ದಾರೆ. ಹೀಗಾಗಿ ಅವರನ್ನು ಸೆಳೆಯಲು ಇಂತಹ ಕ್ರಮಗಳನ್ನು ಕೈಗೊಂಡಿರುವ ಸಾಧ್ಯತೆ ಇದೆ” ಎಂದು ಶಂಕೆ ವ್ಯಕ್ತಪಡಿಸಿದರು.
ಸತೀಶ್ ಸೈಲ್ ಆರೋಗ್ಯ ಸ್ಥಿತಿ ಕುರಿತು ಮಾಹಿತಿ
ಸತೀಶ್ ಸೈಲ್ ಕುರಿತು ಮಾತನಾಡಿದ ಸಚಿವರು, “ಅವರು ಮೊಬೈಲ್ ಸ್ವಿಚ್ ಆಫ್ ಮಾಡಿ ಎಲ್ಲೂ ಹೊಗಿಲ್ಲ. ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಡಿ ದಾಳಿ ಆಗುವ ಮೊದಲೇ ಸೈಲ್ ಅವರು ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದ ಬಗ್ಗೆ ಹೆಚ್ಚಿಗೆ ಮಾತ್ನಾಡಲ್ಲ..
ಇಡಿ ದಾಳಿಗೆ ಸಮರ್ಥ ಪ್ರತಿರೋಧ
“ಸತೀಶ್ ಸೈಲ್ ಇಡಿ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಾರೆ. ಅವರಿಗೆ ಅವರದ್ದೇ ಆದ ಆರ್ಥಿಕ ಮೂಲಗಳಿವೆ. ಶಾಸಕರಾಗುವ ಮೊದಲು 150 ಕೋಟಿ ರೂ. ಇನ್ಕಮ್ ಟ್ಯಾಕ್ಸ್ ಕಟ್ಟಿದವರು. ಅವರು ಮತ್ತೆ ಗೆಲ್ಲುವ ಸಾಧ್ಯತೆ ಇದೆ ಎಂಬ ಅರಿವಿನಿಂದಲೇ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ” ಎಂದು ಆರೋಪಿಸಿದರು.
ಇದನ್ನೂ ಓದಿ:Cyclone/ವಾಯುಭಾರ ಕುಸಿತ ; ಉತ್ತರ ಕನ್ನಡದಲ್ಲಿ ಭಾರೀ ಗಾಳಿ-ಮಳೆ ಸಾಧ್ಯತೆ