ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕಾಡಿನಿಂದ ಸಮುದ್ರದಲ್ಲಿ ಬಿದ್ದು ಮೃತಪಟ್ಟಿರುವ ಜಿಂಕೆಯ ಮೃತ ದೇಹ ನಗರದ ಟ್ಯಾಗೋರ್ ಕಡಲತೀರದ ರಾಕ್ ಗಾರ್ಡನ್ ಬಳಿ ಪತ್ತೆಯಾಗಿದೆ.
ಸಂಜೆಯ ವೇಳೆಗೆ ವಾಯು ವಿಹಾರಕ್ಕೆ ಬಂದಿದ್ದ ಸಾರ್ವಜನಿಕರಿಗೆ ಸಮುದ್ರ ತೀರದಲ್ಲಿ ಜಿಂಕೆಯ ಮೃತ ದೇಹ ಬಿದ್ದಿರುವುದು ಕಂಡ ಬಂದಿದೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜಿಂಕೆಯ ಮೃತದೇಹವನ್ನ ಮರೋಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಭೂದೇವಿ ಗುಡ್ಡ ಅಥವಾ ಲೇಡೀಸ್ ಬೀಚ್ ಬದಿಯಿಂದ ಬಂದ ಈ ಜಿಂಕೆ, ಆಕಸ್ಮಿಕವಾಗಿ ಸಮುದ್ರದಲ್ಲಿ ಬಿದ್ದು ಮೃತಪಟ್ಟಿರ ಬಹುದು ಎಂದು ಅರಣ್ಯ ಇಲಾಖೆಯ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಜಿಂಕೆ ಸಮುದ್ರದ ಅಲೆಗಳ ರಭಸಕ್ಕೆ ಉಸಿರುಗಟ್ಟಿ ಜಿಂಕೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಮೃತ ಜಿಂಕೆಗೆ ಸುಮಾರ 6ರಿಂದ 7 ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದ್ದು,ಕಳೆದ ಎರಡು ದಿನಗಳ ಹಿಂದೆ ಸಮುದ್ರಕ್ಕೆ ಬಿದ್ದು ಜಿಂಕೆ ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಹಟ್ಟಿಕೇರಿಯಲ್ಲಿ ಗ್ರಾಮೀಣ ಕ್ರೀಡೆಗೆ ಜೀವ ತುಂಬಿದ ಕೇಸರುಗದ್ದೆ ಕ್ರೀಡಾಕೂಟ