ಗ್ರಂಥಾಲಯ ಪಿತಾಮಹ ಡಾ// ಎಸ್. ಆರ್. ರಂಗನಾಥನ್ ರವರ ೧೪೩ನೇ ಜನ್ಮದಿನವಾಗಿದೆ. ಗ್ರಂಥಾಲಯಕ್ಕೆ ಎಸ್. ಆರ್. ರಂಗನಾಥನ್ ರವರ ಸೇವೆ ಮತ್ತು ಕೊಡುಗೆ ಅಪಾರವಾಗಿದೆ. ಗ್ರಂಥಾಲಯಕ್ಕೆ ತಮ್ಮನ್ನು ತಾವು ತದೇಕಚಿತ್ತವಾಗಿ ತೊಡಗಿಸಿಕೊಂಡವರು ಅವರು ತಮ್ಮ ಜನ್ಮದಿನವನ್ನು ಗ್ರಂಥಪಾಲಕರ ದಿನವನ್ನಾಗಿ ಆಚರಿಸಿರುವರು.

ಕುಮಟಾ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಅರಿವು ಕೇಂದ್ರದ ಗ್ರಂಥಪಾಲಕರೊಂದಿಗೆ ಮಾನ್ಯ ತಾಲ್ಲೂಕ ಕಾರ್ಯ ನಿರ್ವಹಣಾ ಅಧಿಕಾರಿಯವರಾದ ಉದಯ ನಾಯ್ಕ ಸರ್ ರವರು ತುಂಬಾ ಅರ್ಥವತ್ತಾಗಿ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು. ಎಲ್ಲಿ ಗ್ರಂಥಾಲಯ ಇರುವುದು ಅಲ್ಲಿ ಜ್ಞಾನಭಿವೃದ್ಧಿ ಇರುವುದು. ಹೆಚ್ಚು ಹೆಚ್ಚು ಪುಸ್ತಕಗಳು ಬಳಕೆ ಆಗುವಂತಾಗಲಿ..

ಮಕ್ಕಳು, ಯುವಜನತೆಗೆ, ಸಾರ್ವಜನಿಕರು ಗ್ರಂಥಾಲಯದ ಉಪಯೋಗ ಪಡೆದುಕೊಳ್ಳುವಂತಾಗಲಿ, ನಾನು ಕೂಡ ಗ್ರಂಥಾಲಯದ ವಿಜ್ಞಾನದ ಪದವಿ ಪಡೆದ್ದೇನೆ. ಅದರ ಅರಿವು ನನಗೂ ಇದೆ. ನಮ್ಮೆಲ್ಲಾ ಅರಿವು ಕೇಂದ್ರಗಳಿಗೆ ನಮ್ಮ ತಾಲ್ಲೂಕ ಮಟ್ಟದಿಂದ ಏನು ಸಹಾಯ ಬೇಕು ಅದನ್ನ ನೆರವೇರಿಸುವೆವು ಎಂದು ಮುಕ್ತ ಮನಸ್ಸಿನಿಂದ ಶುಭಕೋರಿರುವರು.

ಅವರಿಗೆ ನಮ್ಮೆಲ್ಲಾ ಗ್ರಂಥಪಾಲಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು. ಸಾರ್ವಜನಿಕರು ಗ್ರಂಥಾಲಯವನ್ನು ಸಾರ್ವತ್ರಿಕವಾಗಿ ಎಲ್ರೂ ಉಪಯೋಗಿಕೊಳ್ಳುವಂತಾಗಲಿ.
ಓದು ಮನುಷ್ಯನ ಜೀವನವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ಅತ್ಯುತ್ತಮ ಸಾಧನವಾಗಿದೆ.
ಓದು ನಮ್ಮ ಜನ್ಮ ಸಿದ್ಧ ಹಕ್ಕಾಗಿದೆ.

ಈ ಹಕ್ಕನ್ನು ಚಲಾಯಿಸಲು ಎಲ್ಲಾ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸುತ್ತಿದೆ ಅದನ್ನು ಉಪಯೋಗಿಸ್ಕೋಬೇಕು.ಇನ್ನೂ ಗ್ರಂಥಾಲಯಗಳು ಜ್ಞಾನದ ಬೀಗದ ಕೈ ಆಗಿದ್ದು ಪಾವಿತ್ರ್ಯತೆ ಹಾಗೂ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತದೆ.
ಇದರ ಕುರಿತಾಗಿ ಭಗವದ್ಗೀತೆಯ ಶ್ಲೋಕವೊಂದರಲ್ಲಿ ಹೀಗಿದೆ..

“ನಹಿ ಜ್ಞಾನೇನ ಸದೃಶಂ ಪವಿತ್ರನಿಮಿಹ ವಿಧ್ಯತೇ”
ಅಂದರೆ ಪ್ರಪಂಚದಲ್ಲಿ ಜ್ಞಾನಕ್ಕಿಂತ ಪವಿತ್ರವಾದ ವಸ್ತುವಾಗಲಿ ಶಕ್ತಿಯಾಗಲಿ ಬೇರೊಂದಿಲ್ಲ ಎಂಬುದಾಗಿ ಮಹಾಭಾರತ ಅರ್ಥೈಸುತ್ತದೆ.

ನಿಜ ಕಣ್ರೀ..
ಈ ಓದಿನ ರುಚಿ ಇದೆ ನೋಡ್ರೀ ಬಲ್ಲವರೇ ಬಲ್ಲರು ಕಣ್ರೀ..ಪ್ರಪಂಚದಲ್ಲಿ ಮನುಷ್ಯನಿಗೆ ಏನೇನೋ ಹುಚ್ಚು ಇರುತ್ತದೆ ಬಟ್ ನಾವುಗಳು ಓದಿನ ಹುಚ್ಚು ಬೆಳಿಸ್ಕೊಂಡ್ರೆ ತಪ್ಪಾಗಲಾರದು ಅಲ್ವೇನ್ರೀ…?

ಕು. ಜಿ… ✍️

ಇದನ್ನೂ ಓದಿ:ದರ್ಶನ್‌ಗೆ ಜಾಮೀನು ಬಾಗಿಲು ಮುಚ್ಚಿದ ಸುಪ್ರೀಂ : ದರ್ಶನ್, ಪವಿತ್ರಾ, ಬ್ಯಾಕ್ ಟು ಜೈಲು