ಸುದ್ದಿಬಿಂದು ಬ್ಯೂರೋ
ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಹಳಿಯಾಳ–ದಾಂಡೇಲಿ ರಸ್ತೆಯ ಅಲೈಡ್ ಏರಿಯಾದಲ್ಲಿ ಬಟ್ಟೆ ತೊಳೆಯುವ ಸ್ಥಳದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಭೀತಿ ಹುಟ್ಟಿಸುವಂತೆ ಮಾಡಿದೆ.

ಕಾಳಿ ನದಿ ದಡದಲ್ಲಿರುವ ಈ ಪ್ರದೇಶದಲ್ಲಿ 10–12 ಅಡಿ ಉದ್ದದ ಮೊಸಳೆ ನೀರಿನಿಂದ ಮೇಲಕ್ಕೆ ಬಂದಿದ್ದು, ಇದನ್ನ ಕಂಡ ಸ್ಥಳೀಯರು, ಬೆಚ್ಚಿಬಿಳುವಂತೆ ಮಾಡಿದೆ. ಮೊಸಳೆಯನ್ನ ಕಂಡ ಸ್ಥಳೀಯರು‌ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ..

ಸುದ್ದಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಸುರಕ್ಷಿತವಾಗಿ ಮೊಸಳೆಯನ್ನು ಹಿಡಿದು ನದಿಗೆ ಬಿಟ್ಟಿದ್ದಾರೆ.ಈ ಘಟನೆ ದಾಂಡೇಲಿಯಲ್ಲಿ ಮತ್ತೆ ಮೊಸಳೆ ಆತಂಕವನ್ನು ಹುಟ್ಟಿಸಿದೆ.

ಇದನ್ನೂ ಓದಿ:Karwar/ ಕಾರವಾರದಲ್ಲಿ ಬಸ್‌ಗೆ ಬೈಕ್ ಡಿಕ್ಕಿ : ಸವಾರ ಸ್ಥಳದಲ್ಲೇ ಸಾವು