ಕ್ರೈಂ ನ್ಯೂಸ್
ಸುದ್ದಿಬಿಂದು ಬ್ಯೂರೋ ವರದಿ
ಫತೋರ್ಡಾ: ದಕ್ಷಿಣ ಗೋವಾದ ಫತೋರ್ಡಾದ ಸಗುನ್ ರೆಸಾರ್ಟ್ ಬಳಿ ನಡೆ ಸಶಸ್ತ್ರ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಆರೋಪಿ ಗುಂಪು ಗುಂಡು ಹಾರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೆಳಗಿನ ಜಾವ 2.45ರ ಸುಮಾರಿಗೆ,ಅಕ್ಷಯ್ ತಲ್ವಾರ್, ರಾಹುಲ್ ತಲ್ವಾರ್ (ಬೋರ್ಡಾ), ವಿಲ್ಸನ್ ಕಾರ್ವಾಲ್ಹೋ, ಶಾರುಖ್ (ದಾವೋರ್ಲಿಂ), ರಸೂಲ್ (ಮಾರ್ಗಾವ್) ಹಾಗೂ ಇನ್ನೂ ಸುಮಾರು 15 ಮಂದಿ ಮುಸುಕುಧಾರಿಗಳು ಮಾರಕ ಆಯುಧಗಳೊಂದಿಗೆ ಬಂದು, ಮಾರ್ಗೋವಾ ಮೂಲದ ಯುವಕೇಶ್ ಸಿಂಗ್ ಬದೈಲಾ ಹಾಗೂ ಅವನ ಸ್ನೇಹಿತ ರಫೀಕ್ ಅವರನ್ನು ತಡೆದು ಹಲ್ಲೆ ನಡೆಸಿದ್ದಾರೆ.

ಆರೋಪಿಗಳ ಗುಂಪು ಸೋಡಾ ಬಾಟಲಿಗಳು ಹಾಗೂ ಕೊಯ್ಟಾ ಬಳಸಿಕೊಂಡು ಹಲ್ಲೆ ನಡೆಸಿದ ನಂತರ, ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಬಳಿಕ ಅವರ ಕಾರಿಗೆ ಡಿಕ್ಕಿ ಹೊಡೆದು ನಾಶಮಾಡಿದ ಘಟನೆ ಸಹ ನಡೆದಿದೆ.

ಈ ಸಂಬಂಧ ಯುವಕೇಶ್ ಸಿಂಗ್ ಬದೈಲಾ ನೀಡಿದ ದೂರಿನ ಮೇರೆಗೆ ಫತೋರ್ಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಹಚ್ಚಿ ಬಂಧಿಸಲು ಪೊಲೀಸರು ತೀವ್ರ ಶೋಧ ಚಟುವಟಿಕೆ ಆರಂಭಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಶಾಸಕನ ಮೇಲೆ ಈಡಿ ದಾಳಿ