ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ರಸ್ತೆಯಲ್ಲಿನ ಗುಂಡಿ, ಬಸ್ ಅವ್ಯವಸ್ಥೆ, ಮೂಲಭೂತ ಸೌಕರ್ಯದ ಕೊರತೆಯ ವಿರುದ್ಧ ಶಿರಸಿಯಲ್ಲಿಂದು ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಶ್ರೀ ಮಾರಿಕಾಂಬಾ ದೇವಾಲಯದಿಂದ ಸಹಾಯಕ ಆಯುಕ್ತರ ಕಚೇರಿ ತನಕ ಪಾದಯಾತ್ರೆ ನಡೆಸಿ, ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ, “ಇದು ಪಕ್ಷಾತೀತ ಹೋರಾಟವಾಗಿದೆ. ಜನರ ಜೀವ ಹಾನಿಯಾಗುತ್ತಿರುವ ದುರಸ್ತಿ ಇಲ್ಲದ ರಸ್ತೆ ಸ್ಥಿತಿ, ಹದಗೆಟ್ಟ ಬಸ್‌ಗಳಿಂದ ಉಂಟಾಗುತ್ತಿರುವ ಅಪಘಾತ, ಅವ್ಯವಸ್ಥೆ ಎದುರಿಸುತ್ತಿರುವ ಸಾರ್ವಜನಿಕರ ಪರವಾಗಿ ನಾವು ಬೀದಿಗಿಳಿದಿದ್ದೇವೆ” ಎಂದು ಹೇಳಿದರು.
ಮಾಹಿತಿಯ ಹಕ್ಕಿನಡಿ ದೊರೆತ ಮಾಹಿತಿ ಪ್ರಕಾರ 149 ಬಸ್‌ಗಳಲ್ಲಿ 79 ಬಸ್‌ಗಳು 10 ಲಕ್ಷ ಕಿ.ಮೀ.ಗೆ ಮೀರಿದವೆಂದು ಅವರು ಆಕ್ಷೇಪಿಸಿದರು. ಮಕ್ಕಳ ಸುರಕ್ಷತೆ, ಸಾರ್ವಜನಿಕರ ಹಿತಾಸಕ್ತಿ ಹಾಗೂ ಸಾರ್ವಜನಿಕ ಹಣ ಸರಿಯಾಗಿ ಬಳಕೆಯಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಬಿಜೆಪಿ ಮುಖಂಡರು ಉಷಾ ಹೆಗಡೆ, ರಮೇಶ್ ನಾಯ್ಕ, ಮಹಾಂತೇಶ್ ಹಾದಿಮನಿ, ರಾಮು ಕಿಣಿ, ಶೋಭಾ ನಾಯ್ಕ, ಜಯಶೀಲ ಗೌಡರ್, ಮಂಜುನಾಥ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಅಧಿಕಾರಿ ದುರುಪಯೋಗ: ಉತ್ತರಕನ್ನಡ ಗೃಹರಕ್ಷಕದಳದ ಸಮಾದೇಷ್ಠ ಡಾ.ಸಂಜು ನಾಯಕ ವಜಾ