ಸುದ್ದಿಬಿಂದು ಬ್ಯೂರೋ‌ ವರದಿ
Kumta/ಕುಮಟಾ : ಶಾಮಿಯಾನ, ಡೆಕೋರೇಷನ್, ಧ್ವನಿ ಮತ್ತು ಬೆಳಕು ಸಂಯೋಜಕರ ಸಂಘದ ಉತ್ತರಕನ್ನಡ ಜಿಲ್ಲಾ ಪದಾಧಿಕಾರಿಗಳ ಅವಿರೋಧ ಆಯ್ಕೆ ನಡೆಯಿತು..

ಕುಮಟಾದ ಮಹಾಸತಿ ಸಭಾಭವನದಲ್ಲಿ ನಡೆದ ಶಾಮಿಯಾನ, ಡೆಕೋರೇಷನ್, ಧ್ವನಿ ಮತ್ತು ಬೆಳಕು ಸಂಯೋಜಕರ ಸಮಾಗಮ ಸಂಘದ ಸಭೆಯಲ್ಲಿ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.. ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ನಡೆದಿದ್ದು, ಭಟ್ಕಳದ ಸುಲೇಮಾನ್ ಅಧ್ಯಕ್ಷರಾಗಿ, ಬರ್ಗಿಯ ದಿನಕರ ಕಾಶಿನಾಥ ನಾಯ್ಕ ಪ್ರಧಾನಕಾರ್ಯದರ್ಶಿಯಾಗಿ, ನಿನಾದ ರಾಮಣ್ಣ ಗೌರವಾಧ್ಯಕ್ಷರಾಗಿ, ಕೋಶಾಧ್ಯಕ್ಷರಾಗಿ ಎಮ್.ಎಮ್. ಮಾಂಡಳಿಕರ್ (ಕಾರವಾರ) ಆಯ್ಕೆಗೊಂಡಿದ್ದಾರೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ ನಾಯ್ಕ (ಹೊನ್ನಾವರ), ಸಂಘಟನಾ ಕಾರ್ಯದರ್ಶಿಯಾಗಿ ಆನಂದ ಗೌಳಿ (ಶಿರಸಿ), ಸಂಚಾಲಕರಾಗಿ ಸುನೀಲ್ ವೇರ್ಣೆಕರ್ (ಅಂಕೋಲಾ) ಅವರನ್ನು ಆಯ್ಕೆ ಮಾಡಲಾಯಿತು. ನೂತನವಾಗಿ ಆಯ್ಕೆಗೊಂಡ‌ ಎಲ್ಲಾ ಪದಾಧಿಕಾರಿಗಳನ್ನ ಸನ್ಮಾನಿಸಿ ಗೌರವಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಬಂದ ಶಾಮಿಯಾನ, ಡೆಕೋರೇಷನ್ ಮಾಲೀಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಹೊಸದಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು ವ್ಯಕ್ತವಾಗಿವೆ.

ಇದನ್ನೂ ಓದಿ:”NHM ಸಿಬ್ಬಂದಿಗೆ ಬಂಪರ್ ಸುದ್ದಿ! ತೆರವು ಮಾಡುವ ಪ್ರಶ್ನೆ ಇಲ್ಲ : ಸಚಿವರು ಸ್ಪಷ್ಟನೆ”