ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಇಷ್ಟಾರ್ಥ ಈಡೇರುವ ಯಜ್ಷಗಳಾದ ಅನ್ನದಾನ, ವಿದ್ಯಾದಾನ, ಆಧ್ಯಾತ್ಮಿಕ ದಾನದ ಮೂಲಕ ಕೋನಳ್ಳಿ ಯಜ್ಞಭೂಮಿಯಾಗಿ ಶೋಭಿಸುತ್ತಿದೆ. ಈ ಸತ್ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ಒಳಿತಾಗಲಿ ಎಂದು ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಆಶೀರ್ವದಿಸಿದರು.

ಕುಮಟಾ ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಚಾತುರ್ಮಾಸ್ಯ ವ್ರತಾಚರಣೆಯ ೨೧ನೇ ದಿನದ ಕಾರ್ಯಕ್ರಮದಲ್ಲಿ ಹೆರಂಗಡಿ, ಸಾಗರ ಮತ್ತು ಶಿವಮೊಗ್ಗ ಭಾಗದ ನಾಮಧಾರಿ ಸಮಾಜಬಾಂಧವರಿಂದ ಸಲ್ಲಿಕೆಯಾದ ಗುರು ಸೇವೆಯನ್ನು ಸ್ವೀಕರಿಸಿ, ಆಶೀರ್ವಚನ ನೀಡಿದ ಶ್ರೀಗಳು,

ಹೊದಿಕೆ ಇಲ್ಲದ ಮನೆಯು ಹೇಗೆ ವಾಸಕ್ಕೆ ಯೋಗ್ಯವಲ್ಲವೋ ಹಾಗೆ ಮನಸೆಂಬ ಮನೆಗೆ ಹೊದಿಕೆ ಇದ್ದಾಗ ಮಾತ್ರ ಅರಿಷಠ್ ವರ್ಗಗಳನ್ನು ನಿಯಂತ್ರಿಸಬಹುದು.ಯಾವುದೇ ಕೆಲಸ ಮಾಡುವಾಗ ಅದನ್ನು ನಿಷ್ಠೆ, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವದಿಂದ ಮಾಡಿದಾಗ ಆ ಕಾರ್ಯ ಯಶಸ್ವಿಯಾಗುತ್ತದೆ. ಅತೀ ಬುದ್ದಿವಂತಿಕೆ ಪ್ರದರ್ಶನ ಮಾಡಲು ಹೋದರೆ ಒಳಿತಿಗಿಂತ ಕೆಡಕೆ ಜಾಸ್ತಿಯಾಗುತ್ತದೆ. ಭಗವಂತ ಕೊಟ್ಟಿದ್ದನ್ನು ಬಿಟ್ಟು, ಬೇರೆ ವ್ಯವಸ್ಥೆಗೆ ಹೋಗುವುದು ಅಷ್ಟೊಂದು ಸುಲಭವಲ್ಲ. ಹಾಗಾಗಿ ಒಳಿತನ್ನು ಮಾಡುವ ಚಾತುರ್ಮಾಸ್ಯದ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಯತಾಶಕ್ತಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಆ ಸೇವೆ ಶ್ರೀ ವನದುರ್ಗೆಗೆ, ಶ್ರೀಮನ್ ನಾರಾಯಣನಿಗೆ ಸಲ್ಲಿಕೆಯಾಗುತ್ತದೆ. ಆ ಮೂಲಕ ಭಗವಂತ ನಿಮ್ಮೆಲ್ಲರಿಗೂ ಒಳಿತನ್ನೆ ಮಾಡುತ್ತಾನೆ. ವಿವಿಧ ಯಜ್ಞಗಳು, ಸಾಮಾಜಿಕ ಯಜ್ಞಗಳಾದ ಅನ್ನದಾನ, ವಿದ್ಯಾದಾನ, ಔಷಧೋಪಚಾರ ದಾನಗಳ ಮೂಲಕ ಕೋನಳ್ಳಿ ಗ್ರಾಮ ಯಜ್ಞಭೂಮಿಯಾಗಿ ಶೋಭಿಸುತ್ತಿದೆ. ಈ ಮೂಲಕ ಎಲ್ಲ ಸದ್ಭಕ್ತರಿಗೆ ಒಳಿತೆ ಆಗಲಿದೆ ಎಂದು ಶ್ರೀಗಳು ಹರಸಿದರು.

ಚಾತುರ್ಮಾಸ್ಯದ 21ನೇ ದಿನದ ವ್ರತಾಚಾರಣೆಯಲ್ಲಿ ಹೇರಂಗಡಿ ಗ್ರಾಮ ಪಂಚಾಯತ್ ವಾಪ್ತಿಯ ಕೆಳಗಿನ ಮೂಡ್ಕಣಿ, ಮೇಲಿನ ಮೂಡ್ಕಣಿ, ತೊಂಬೊಳ್ಳಿ ಮೂಡ್ಕಣಿ, ಅಡಕಾರ ಮೂಡ್ಕಣಿ, ಗುಡ್ಡೆಕೇರಿ, ಹೈಗುಂದ-ಅಳ್ಳಂಕಿ ಗ್ರಾಮದ ಸಮಸ್ತ ನಾಮಧಾರಿ ಸಮಾಜ ಬಾಂಧವರು ಹಾಗೂ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ, ಶಿವಮೊಗ್ಗ, ಸಾಗರ ಇವರು ಗುರುಪಾದುಕಾ ಪೂಜೆ ಸಲ್ಲಿಸಿದರು. ವೆಂಕಟೇಶ ಹನುಮಂತ ನಾಯ್ಕ್ ದಂಪತಿಗಳು ಮೂಡ್ಕಣಿ ಹಾಗೂ ವೆಂಕಟೇಶ ತಿಮ್ಮಪ್ಪ ನಾಯ್ಕ್ ದಂಪತಿಗಳು ಮೂಡ್ಕಣಿ ಇವರು ವೈಯಕ್ತಿಕ ಗುರುಪಾದುಕಾ ಪೂಜೆ ಸಲ್ಲಿಸಿದರು.

ತಿಮ್ಮಪ್ಪ ತಿಪ್ಪಯ್ಯ ನಾಯ್ಕ್ ದಂಪತಿಗಳು ಮೂಡ್ಕಣಿ ಇವರು ವಿಶೇಷ ಸೇವೆ ಸಲ್ಲಿಸಿದರು. ಶಿವರಾಮ ನಾಯ್ಕ್ – E.E ಆರ್ಭನ್ ವಾಟರ್ ಬೋರ್ಡ್ ಕಾರವಾರ ಇವರು ಆಗಮಿಸಿದ್ದರು. ಶಿವರಾಮ ಸುಬ್ರಾಯ ನಾಯ್ಕ್ ಮೂಡ್ಕಣಿ ಇವರು ಗುರು ಸೇವೆ ಸಲ್ಲಿಸಿದರು.

ಇದನ್ನೂ ಓದಿ :”NHM ಸಿಬ್ಬಂದಿಗೆ ಬಂಪರ್ ಸುದ್ದಿ! ತೆರವು ಮಾಡುವ ಪ್ರಶ್ನೆ ಇಲ್ಲ : ಸಚಿವರು ಸ್ಪಷ್ಟನೆ”