ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲ್ಲೂಕಿನ ಎತ್ತಿನಬೈಲ್‌ನಲ್ಲಿ ಯುವಕನೊಬ್ಬ ವಿದ್ಯುತ್ ಶಾಕ್‌ ತಗುಲಿ ಮೃತಪಟ್ಟ ಘಟನೆ ನಡೆದಿದೆ..

ಮೃತ ಯುವಕ ಚೇತನ (19), ರಾಮಕೃಷ್ಣ ಪಟಗಾರ ಎಂದು ಗುರುತಿಸಲಾಗಿದೆ.ಈತ ಗ್ಯಾರೆಜ್‌ನಲ್ಲಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಇದ್ದಾಗ, ಮೇಲ್ಮಹಡಿಯಲ್ಲಿ ಇದ್ದ ಸಿಂಟೆಕ್‌ ಟ್ಯಾಂಕ್‌ನಲ್ಲಿ ನೀರು ಖಾಲಿಯಾಗಿದ್ದ ಕಾರಣ ಕರೆಂಟ್ ಸ್ವಿಚ್ ಹಾಕಿ ಹಿಂಬಾಗಿಲಿನಿಂದ ಹೊರಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.

ಮನೆಯಿಂದ ಪಂಪ್‌ಸೆಟ್‌ಗೆ ಹಾಕಿದ್ದ ವಿದ್ಯುತ್ ವೈರು ಆಕಸ್ಮಿಕವಾಗಿ ತುಂಡಾಗಿ ಚೇತನನ ಮೇಲೆ ಬಿದ್ದಿದ್ದು, ತೀವ್ರ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈ ಕುರಿತು ಮೃತನ ಅಣ್ಣನ ಮಗ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ, ಈತನ ಸಾವಿನಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:ಮೋದಿ ಉತ್ತರ ಕೊಡಲಾಗದ ಪ್ರಧಾನಮಂತ್ರಿ, ಕೇಂದ್ರ ಸರ್ಕಾರದ ವೈಫಲ್ಯಗಳ ಪಟ್ಟಿ ಬಿಚ್ಚಿಟ್ಟ ದಿನೇಶ್