ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಆರೋಗ್ಯ ಸಚಿವ‌ ದಿನೇಶಗುಂಡೂರಾವ್ ಅವರ ಪ್ರವಾಸದ ವೇಳಾಪಟ್ಟಿಯಲ್ಲಿ ಏಕಾಏಕಿ ಬದಲಾವಣೆ ಆಗಿ ಕುಮಟಾ ಸರಕಾರಿ ಆಸ್ಪತ್ರೆ ಭೇಟಿ ಕೈಬಿಡಲಾಗಿದೆ ಎನ್ನಲಾಗಿದೆ, ಬೆಳಿಗ್ಗೆ ಕಾರವಾರದಿಂದ ಹೊನ್ನಾವರಕ್ಕೆ, ಹೊನ್ನಾವರದಿಂದ ಕಾರವಾರಕ್ಕೆ ಒಂದೇ ಮಾರ್ಗದಲ್ಲಿ ಎರಡು ಬಾರಿ ಆರೋಗ್ಯ ಸಚಿವರು ಸಂಚರಿಸಲಿದ್ದಾರೆ, ಯಾರೇ ಈ ಹೆದ್ದಾರಿಯಲ್ಲಿ ಬಿದ್ದರು ಜಾರಿ ಆಸ್ಪತ್ರೆ ‌ಒಳಗೆ ಹೋಗಿ ಬಿಳಬೇಕು,‌ ಕುಮಟಾ ಆಸ್ಪತ್ರೆ ಹೆದ್ದಾರಿಗೆ ಅಷ್ಟೊಂದು ಹತ್ತಿರದಲ್ಲಿದೆ.ಆದರೆ ಇದೆ ಹೆದ್ದಾರಿಯಲ್ಲಿ ಆರೋಗ್ಯ ಸಚಿವರು ಅದು ಎರಡು ಬಾರಿ ಇದೆ‌ ಮಾರ್ಗದಲ್ಲಿ ಸಂಚರಿಸಲಿದ್ದಾರೆ, ಆದರೂ‌ ಕೂಡ‌ ಕುಮಟಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡುವುದನ್ನ ಕೈ ಬಿಡಲಾಗಿದೆ ಎನ್ನುವುದು ಅವರ ಪ್ರವಾಸದ ವೇಳಾ ಪಟ್ಟಿಯಲ್ಲಿ ಸ್ಪಷ್ಟವಾಗಿ ಗೋಚರವಾಗತ್ತಿದೆ.

ಮೂಲ ವೇಳಾಪಟ್ಟಿಯಲ್ಲಿ ಕುಮಟಾ ಸರಕಾರಿ ಆಸ್ಪತ್ರೆಗೆ ಭೇಟಿ ಉಲ್ಲೇಖಿಸಲಾಗಿದ್ದರೂ, ಇದೀಗ ಬಿಡುಗಡೆಯಾದ ಹೊಸ ವೇಳಾಪಟ್ಟಿಯಲ್ಲಿ ಕುಮಟಾ ಸರಕಾರಿ ಆಸ್ಪತ್ರೆ ಭೇಟಿಯನ್ನ ಕೈಬಿಡಲಾಗಿದೆ. ಬೆಳಿಗ್ಗೆ ಕಾರವಾರದಿಂದ ಹೊನ್ನಾವರಕ್ಕೆ ತೆರಳಿ, ಮಂಕಿ ಆಸ್ಪತ್ರೆಯಲ್ಲಿ‌ ಕಾರ್ಯಕ್ರಮ‌ ಮುಗಿಸಿ ಬಳಿಕ ನೇರವಾಗಿ ಕಾರವಾರಕ್ಕೆ ಹಿಂತಿರುಗುವ ಕಾರ್ಯಕ್ರಮ ಸಚಿವರದ್ದಾಗಿದೆ.

ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಸಂಬಂಧಿಸಿದ ಹೋರಾಟಗಾರರ ಒತ್ತಡವನ್ನು ತಪ್ಪಿಸಿಕೊಳ್ಳಲು ಕುಮಟಾ ಆಸ್ಪತ್ರೆಗೆ ಭೇಟಿ ನೀಡದಿರಲು ಸಚಿವರು ನಿರ್ಧರಿಸಿರುವರೇ ಎಂಬ ಪ್ರಶ್ನೆ ಇದೀಗ ಹುಟ್ಟಿಕೊಳ್ಳುತ್ತಿದೆ.ಒಂದೊಮ್ಮೆ ಆರೋಗ್ಯ ಸಚಿವರು ಕುಮಟಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡದೇ ಹೋದರೆ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿದೆ.ಸಚಿವರ ಏಕಾಏಕಿ ನಿರ್ಧಾರ ಸ್ಥಳೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.‌ ಎಲ್ಲದರಿಂದಲ್ಲೂ ತಪ್ಪಿಸಿಕೊಳ್ಳಬೇಕು ಅಂದರೆ ಸ್ಥಳೀಯ ಮುಖಂಡರು ಸಚಿರ ಗಮನಕ್ಕೆ ತಂದು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ‌ ಅಲ್ಲಿನ ವ್ಯವಸ್ಥೆಯನ್ನ ಪರಿಶೀಲಿಸುವಂತೆ ಮಾಡಬೇಕಿದೆ..

ಆರೋಗ್ಯ ಸಚಿವರು ಕುಮಟಾ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎನ್ನುವ ಕಾರಣಕ್ಕೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗೆ ಹೋರಾಟಗಾರರು ಸೇರಿದಂತೆ ಸಾರ್ವಜನಿಕರು ಸಚಿವರನ್ನ ಭೇಟಿಯಾಗಿ ಮಲ್ಟಿ ಆಸ್ಪತ್ರೆಗೆ ವಿಚಾರವಾಗಿ ಚರ್ಚೆ ನಡೆಸಲು ಮುಂದಾಗಿದ್ದಾರೆ.‌ಒಂದೊಮ್ಮೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಮಾಡೋದಕ್ಕೆ ಸರಕಾರದಿಂದ ಸಾಧ್ಯವಾಗದೆ ಇದ್ದರೆ ಜಿಲ್ಲೆಯ ಮಧ್ಯವರ್ತಿ ಸ್ಥಳ‌ ಹಾಗೂ ಸಾರಿಗೆ,ರೈಲ್ವೆ ಸೇರಿದಂತೆ ಎಲ್ಲಾ ಸಂಚಾರ ಸಂಪರ್ಕ ಕುಮಟಾದಲ್ಲಿ ಉತ್ತಮ ಮಟ್ಟದಲ್ಲಿದೆ.

ಹೀಗಾಗಿ ಜಿಲ್ಲೆಯಲ್ಲಿಯೇ ಉತ್ತಮ ಆರೋಗ್ಯ ಚಿಕಿತ್ಸೆ ನೀಡಲಾಗುತ್ತಿರುವ ಕುಮಟಾ ಸರಕಾರಿ ಆಸ್ಪತ್ರೆಯನ್ನ ಇನ್ನೂ ಮೇಲದರ್ಜೆಗೆ ಏರಿಸಬೇಕು ಎನ್ನುವ ನಿಟ್ಟಿನಲ್ಲಿ ಆರೋಗ್ಯ ಸಚಿವರಿಗೆ ಮನವರಿಕೆ ಮಾಡಲು ಸಾರ್ವಜನಿಕರು ಮುಂದಾಗಿದ್ದಾರೆ. ಹೀಗಾಗಿ ಆರೋಗ್ಯ ಸಚಿವರು ಕುಮಟಾ‌ ಆಸ್ಪತ್ರೆಗೆ ಭೇಟಿ ನೀಡಿ,‌ ಪರಿಶೀಲನೆ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕಾಗಿರುವುದು ಅನಿವಾರ್ಯವಾಗಿದೆ..

ಇದನ್ನೂ ಓದಿ: Shirur landslide/ಶಿರೂರು ದುರಂತದ ಕಥೆ ಬೆಳ್ಳಿತೆರೆಗೆ ; ಸಿನಿಮಾಗೆ ಸಜ್ಜಾಗುತ್ತಿದೆ ಚಿತ್ರ ತಂಡ!