ಸುದ್ದಿಬಿಂದು ಬ್ಯೂರೋ ವರದಿ (Bindu News Network)

ಕಾರವಾರ: ಕಳೆದ ವರ್ಷದ ಮಳೆಗಾಲದಲ್ಲಿ ಶವ ಸಾಗಿಸಲಾಗದೇ, ರಸ್ತೆ ತುಂಬಾ ಹರಿದ ಮಳೆ ನೀರಿನಲ್ಲಿ ಇಲ್ಲಿಯ ನಿವಾಸಿಗಳ ಪರದಾಡಿದ್ದು ಸುದ್ದಿಯಾಗಿತ್ತು. ಕುಮಟಾ ಪಟ್ಟಣದ ಹೆರವಟ್ಟಾ ಸಮೀಪದ ಸೋಕನಮಕ್ಕಿ ಗ್ರಾಮದ ರಸ್ತೆಯ ಪರಿಸ್ಥಿತಿ ಇದಾಗಿದ್ದು. ಮಳೆಗಾಲ ಬಂತೆಂದರೆ ಇಲ್ಲಿಯ ಜನರ ಪಾಡು ಹೇಳತೀರದಾಗಿದೆ. ಆ ವಾರ್ಡ್‌ನಲ್ಲಿ ವಾಸವಿರುವ ಹೆಚ್ಚು ಮತದಾರರನ್ನು ಹೊಂದಿರುವ ಆ ಒಂದು ಸಮಾಜದ ಮತ ಬಂದಿಲ್ಲ ಎಂಬ ಕಾರಣಕ್ಕೆ ಅಭಿವೃದ್ದಿ ಕಾಮಗಾರಿಯನ್ನ ನಿರ್ಲಕ್ಷ್ಯ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ,

ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಭೀತಿಯಿಂದ ಸಾಗಬೇಕು. ಮಳೆ ಬಿತ್ತೆಂದರೆ ಸುತ್ತಲಿನ ಗುಡ್ಡಗಳಿಂದ ಹರಿದು ಬರುವ ನೀರು ರಸ್ತೆಯ ಮೇಲೆ 3ರಿಂದ4 ಅಡಿ ನಿಂತು ಕೊಳ್ಳುತ್ತದೆ.ಮಣ್ಣಿನ ರಸ್ತೆಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ರಸ್ತೆ ಎತ್ತರಿಸಿ ಚರಂಡಿ ನಿರ್ಮಿಸಬೇಕಾದ ವಾಲಗಳ್ಳಿಯ ಗ್ರಾಮ ಪಂಚಾಯತಿ ಕಾಟಾಚಾರಕ್ಕೆ ಜೆ.ಸಿ.ಬಿ. ತಂದು, ಇದ್ದ ರಸ್ತೆಯನ್ನು ಮತ್ತಷ್ಟು ಹದಗೆಡಿಸಿ ಶಾಶ್ವತವಾಗಿ ನೀರು ನಿಲ್ಲುವಂತೆ ಮಾಡಿದೆ. ಈ ಭಾಗದ ಜನಪ್ರತಿನಿಧಿಗಳಿಗೆ ಹಿಂದುಳಿದ ಜನಾಂಗದವರು ಮತ ನೀಡಿಲ್ಲ ಎಂಬ ಕಾರಣಕ್ಕೆ ದಿವ್ಯ ನಿರ್ಲಕ್ಷ ತೋರಿದ್ದಾರೆನ್ನುವ ಆರೋಪ ಕೇಳಿಬಂದಿದೆ. ಇಲ್ಲಿಯ ಜನರು ಈ ರಸ್ತೆ ನಿರ್ಮಿಸಿ ಪ್ರತಿ ಮಳೆಗಾಲದಲ್ಲಿ ತಮಗೆ ಉಂಟಾಗುತ್ತಿರುವ ಸಮಸ್ಯೆಯನ್ನ ಪರಿಹರಿಸಿ ಕೊಡುವಂತೆ ಜಿಲ್ಲಾಧಿಕಾರಿಗಳಿಂದ ಹಿಡಿದು ಎಲ್ಲರಿಗೂ ಮನವಿ ನೀಡುತ್ತಲೇ ಬಂದಿದ್ದಾರೆ.

ಆದರೆ ಭರವಸೆ ನೀಡಿದ ಅಧಿಕಾರಿಗಳು ಹಿಂದೆ ಸರಿಯುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಇಲ್ಲಿಯ ಜನರು ಆರೋಪಿಸುತ್ತಿದ್ದಾರೆ. ಪ್ರತಿ ವರ್ಷ ಇದೇ ಗೋಳು. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು, ತಾಲೂಕಾಡಳಿತ ಈ ಕುರಿತು ಸ್ಥಳ ಪರಿಶೀಲನೆಯಿಂದ ಮಳೆ ನೀರು ನಿಂತಿರುವ ಈ ಸಂದರ್ಭದಲ್ಲಿ ಪರಿಶೀಲಿಸಿ, ಬರುವ ದಿನಗಳಲ್ಲಿ ರಸ್ತೆ ನಿರ್ಮಾಣ, ಸೂಕ್ತ ಚರಂಡಿ ವ್ಯವಸ್ಥೆ ಮಾಡಿ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ವಾಲಗಳ್ಳಿ ಪಂಚಾಯತಿಯ ಪಿ.ಡಿ.ಓ. ಅವರನ್ನು ಕೇಳಿದರೆ ಅನುದಾನದ  ಕೊರತೆ ಇದೆಯೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆಯೇ ಹೊರತು,ಯಾವುದಾದರೂ ಯೋಜನೆಯಲ್ಲಿ ಸೂಕ್ತ ಪ್ರಸ್ತಾವನೆ, ಎಸ್ಟಿಮೇಟ್ ಮಾಡಿ ಕಳಿಸುತ್ತಿಲ್ಲ. ಜಿಲ್ಲಾ ವಿಪ್ಪತ್ತು ನಿರ್ವಹಣಾ ಸಮಿತಿ ಇದನ್ನು ಗಮನಿಸಿ ಪ್ರಕೃತಿ ವಿಕೋಪ ನಿಧಿಯಡಿ ಕಾಮಗಾರಿ ಮಾಡಿಸಿ ಶಾಶ್ವತ ಪರಿಹಾರ ಮಾಡಬೇಕೆಂದು ಸ್ಥಳೀಯ ಹಿಂದುಳಿದ ಸಮುದಾಯದ ಜನರ ಆಗ್ರಹವಾಗಿದೆ.

ಈ ಕಾಲದಲಾದ್ದರೂ ಆ ನಿಮ್ಮ ಆ ಕೊಳಕು ರಾಜಕೀಯ ಬಿಟ್ಟು ಕ್ಷೇತ್ರದ ಜನರ ಹಿತ ಕಾಪಾಡಲು ಮುಂದಾಗಿ,ಎಂದು ಕ್ಷೇತ್ರದ ಜನತೆ ಆಕ್ರೋಶ ಹೊರ ಹಾಕುತ್ತಿದ್ದಾರೆ, ಅಧಿಕಾರಿಗಳು ಇಂತಹ ಜನಪ್ರತಿನಿಧಿಗಳ ಕೈಗೊಂಬೆಯಾಗದೆ. ಜನರ ತೆರಿಗೆ ಹಣದಿಂದ ಸಂಬಳ ತೆಗೆದುಕೊಳ್ಳುವ ನಿವಾದರೂ ಜನರ ಸಮಸ್ಯೆಗೆ ಸ್ಪಂಧಿಸುವ ಮೂಲಕ ಜನಪರ ಅಧಿಕಾರಿಗಳಾಗಿ ಎಂದು ಸೋಕನಮಕ್ಕಿ ಜನ ಈ ಮೂಲಕ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ನಾಯಕರ ಮ್ಯೂಸಿಕಲ್ ಚೇರ್ ಆಸೆಗೆ ರಾಜ್ಯದ ಜನ ಬಲಿಯಾಗುತ್ತಿದ್ದಾರೆ