ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ :ಹಾವೇರಿ ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿ ಆಸ್ಪತ್ರೆ ನಡೆಸುತ್ತಿದ್ದ ವೈದ್ಯ ಬಸವರಾಜ ವೀರಾಪುರ ವಿರುದ್ಧ Fir ದಾಖಲಾಗಿದೆ. ಇಸ್ಪೀಟ್ ಅಡ್ಡೆಯ ದಾಳಿ ಪ್ರಕರಣದ FIRನಲ್ಲಿ ವೈದ್ಯ ಬಸವರಾಜ A1ಆರೋಪಿತ ಎನ್ನುವ ಬಗ್ಗೆ ಪೊಲೀಸರು ದಾಖಲಿಸಿರುವ FIRನಲ್ಲಿ ಸ್ಪಷ್ಟವಾಗಿ ಕನ್ನಡದಲ್ಲಿಯೇ ಅವರ ಹೆಸರನ್ನ ನಮೂದಿಸಿದ್ದಾರೆ.ಈತ ನೆಟ್ಟಗೆ ಆಸ್ಪತ್ರೆ ನಡೆಸುವುದನ್ನ ಬಿಟ್ಟು ಅಕ್ರಮವಾಗಿ ಹಣ ಮಾಡುವ ಸಲುವಾಗಿ ಶಿರಸಿಯಲ್ಲಿ ರೆಸಾರ್ಟ್ ಒಂದನ್ನ ಮಾಡಿಕೊಟ್ಟು ಅದರಲ್ಲಿ ಅಕ್ರಮವಾಗಿ ಕ್ಲಬ್ ನಡೆಸುತ್ತಿದ್ದ,ಈ ಬಗ್ಗೆ ಖಚಿತ ಮಾಹಿತಿ ಪಡೆದ ಶಿರಸಿ ಪೊಲೀಸರು ದಾಳಿ ನಡೆಸಿ ಕ್ಲಬ್ ಮಾಲೀಕ ಡಾ. ಬಸವರಾಜ್ ವೀರಾಪುರ ಸೇರಿ ೨೦ ಮಂದಿಯನ್ನ ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ.
ಈತ ಕಳೆದ ಅನೇಕ ವರ್ಷಗಳಿಂದ ಶಿರಸಿಯ ಬೈರುಂಬೆ ಬಳಿ ರೆಸಾರ್ಟ್ ನಡೆಸಿಕೊಂಡು ಬಂದಿದ್ದ, ಹಾವೇರಿ, ದಾವಣಗೆರೆ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗದಿಂದ ಬರುವ ಜನ್ರಿಗೆ ರೆಸಾರ್ಟ್ ನಲ್ಲಿ ಕ್ಲಬ್ ನಡೆಸಲು ಅವಕಾಶ ಕೊಟ್ಟಿದ್ದ, ನಿತ್ಯವೂ ಈತನ ರೆಸಾರ್ಟ್ ಗೆ ಇಸ್ಪೀಟ್ ಆಡುವುದಕ್ಕೆ ಅಂತಾನೆ ನೂರಾರು ಮಂದಿ ಬರತ್ತಾ ಇದ್ದರು ಎನ್ನುವು ಪೊಲೀಸರ ನಿನ್ನೆ ನಡೆಸಿದ ದಾಳಿಯ ಬಳಿಕ ಮಾಹಿತಿ ಹೊರಬಿದ್ದಿದೆ, ಇನ್ನೂ ಈತ ತನ್ನ ರೆಸಾರ್ಟ್ ನಲ್ಲಿ ಇಸ್ಪೀಟ್ ದಂಧೆಯನ್ನಷ್ಟೆ ಅಲ್ಲದೆ ಅಕ್ರಮ ಹಣಗಳಿಕೆಗಾಗಿ ಇನ್ನೂ ಕೆಲ ಅಕ್ರಮ ಚುವಟಿಕೆ ನಡೆಸಲು ಇಲ್ಲಿ ಅವಕಾಶ ನೀಡುತ್ತಿದ್ದ ಎನ್ನುವ ಮಾತು ಈ ಪ್ರಕರಣದ ಬಳಿಕ ಕೇಳಿ ಬರುತ್ತಿದೆ, ಹೀಗಾಗಿ ಇಲ್ಲಿನ ಪೊಲೀಸರು ಕೇವಲ ಇಸ್ಪೀಟ್ ಪ್ರಕರಣಕ್ಕಷ್ಟೆ ತನಿಖೆ ನಡೆಸದೆ ಇಲ್ಲಿ ಇನ್ನೂ ಯಾವೇಲ್ಲಾ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎನ್ನುವ ನಿಟ್ಟಿನಲ್ಲೂ ಕೂಡ ಮುಂದಿನ ದಿನದಲ್ಲಿ ತನಿಖೆ ಮಾಡಬೇಕಿರೋದು ಅವಶ್ಯಕವಾಗಿದೆ ಎಂದು ಈತನ ಬಗ್ಗೆ ತಿಳಿದುಕೊಂಡವರು ಆಡಿಕೊಳ್ಳುತ್ತಿದ್ದಾರೆ.
ಶಿರಸಿಯಲ್ಲಿ ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ಪ್ರಕರಣ : “ಸಾಮಾನ್ಯ ಜನ ಅಂದರ್, ಪ್ರಭಾವಿಗಳು ಬಾಹರ್”.
ಹಾವೇರಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಯಲ್ಲಾಪುರ ರಸ್ತೆಯಲ್ಲಿರುವ ಬೈರುಂಬೆ ಬಳಿ ಇರುವ ಡಾ. ರೆಸಾರ್ಟ್‌ನಲ್ಲಿ ಅಂದರ್-ಬಾಹರ್ ಆಟವಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು, ಹಾವೇರಿ ಹಾಗೂ ದಾವಣಗೆರೆ ಮೂಲದ ವ್ಯಕ್ತಿಗಳನ್ನ ವಶಕ್ಕೆ ಪಡೆದಿದ್ದು, ಈ ಪ್ರಕರಣದಲ್ಲಿ ಸಾಮಾನ್ಯ ಜನರು ಬಂಧನವಾಗಿದ್ದು, ಪ್ರಭಾವಿಗಳು ರಾಜಕೀಯ ಪ್ರಭಾವದ ಒತ್ತಡದಿಂದ ಬಂಧನದಿಂದ ಪಾರಾಗಿದ್ದಾರೆ ಎನ್ನುವುದು ಹಾವೇರಿ, ದಾವರಗೆರೆ ಜಿಲ್ಲೆಯ ಓಣಿ ಓಣಿಯಲ್ಲಿ ಚರ್ಚೆ ಆಗುತ್ತಿದೆ.
ಹಾವೇರಿ ಜಿಲ್ಲೆಯ ಭೀರಪ್ಪ ಕನಕಾಪುರ,ಪ್ರಶಾಂತ್ ಬೊಮ್ಮನಳ್ಳಿ, ನಾಗೇಶ ಆನವಟ್ಟಿ,ಸ್ವಾಮಿ ನಿಂಗಣ್ಣಹಳ್ಳಿ ಸೇರಿ ಹಲವರನ್ನ ಬಂಧಿಸಲಾಗಿದೆ. ಶಿರಸಿಯ ವೈದ್ಯರ ರೆಸಾರ್ಟ್ ನಲ್ಲಿ ಆಟವಾಡೋದಕ್ಕೆ ಅಂತಾ ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಯಿಂದ ಪ್ರಭಾವಿ ವ್ಯಕ್ತಿಗಳು ಲಕ್ಷಾಂತರ ಬೆಲೆ ಬಾಳುವ ಪ್ರತ್ಯೇಕ ವಾಹನದಲ್ಲಿಯೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಬಂದಿದ್ದರು ಎನ್ನಲಾಗಿದೆ. ವೈದ್ಯರ ರೆಸಾರ್ಟ್ ನಲ್ಲಿ ಅಂದರ್ ಬಾಹರ್ ನಡೆಯುತ್ತಿದೆ ಎನ್ನುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಶಿರಸಿ ಪೊಲೀಸರು ದಾಳಿ ನಡೆಸಿದ್ದರು. ಪ್ರಭಾವಿಗಳ ಅಂದರ್ ಬಾಹರ್ ಅಡ್ಡೆಯ ಮೇಲೆ ದಾಳಿ ಆಗತ್ತಾ ಇರುವಂತೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ವ್ಯಕ್ತಿಗಳು ತಮ್ಮ ರಾಜಕೀಯ ಪ್ರಭಾವದಿಂದಾಗಿ ಅಂದರ್ ಆಗೋದರಿಂದ ತಪ್ಪಿಸಿಕೊಂಡು ತಮ್ಮ ಜೊತೆಯಲ್ಲಿ ಬಂದಿದ್ದ ಸೇವಕರನ್ನ ಈ ಕೇಸ್ ನಲ್ಲಿ ಸಿಕ್ಕಿಸಿ ತಾವು ಪಾರಾಗಿದ್ದಾರೆ ಎನ್ನುವ ವಿಚಾರ ಗುಟ್ಟಾಗಿ ಉಳಿದುಕೊಂಡಿಲ್ಲ.
ತಮ್ಮ ಪ್ರಭಾವ ಬಳಸಿ ತಪ್ಪಿಸಿಕೊಂಡ ಅನೇಕ ಮಂದಿ ಈಗ ಹಾವೇರಿ ಹಾಗೂ ದಾವಣಗೆರೆಯಲ್ಲಿ ಸಂಜೆ ಹೊತ್ತಲ್ಲಿ ಬಿಸಿಬಿಸಿ ಚಹಾದ ಜೊತೆ ಮಂಡಕ್ಕಿ ಸವಿಯುತ್ತಾ ಶಿರಸಿ ಘಟನೆಯನ್ನ ಮೇಲ್ಕು ಹಾಕತ್ತಿದ್ದಾರೆ. ನಮ್ಮ ನಾಯಕರು ಇಲ್ಲದೆ ಹೋಗಿದ್ದರೆ ಇಷ್ಟ ಹೊತ್ತಿಗಾಲೇ ನಾವೇಲ್ಲಾ ಶಿರಸಿ ಠಾಣೆಯಲ್ಲಿ ಇರತ್ತಾ ಇದ್ದವಿ. ಕಾಸ್ ಹೋದರು ಚಿಂತೆಯಿಲ್ಲ. ಮಾನ ಉಳಸಕೊಂಡ ಬಂದ್ವಿ ಅಂತೆಲ್ಲಾ ಮಾತ್ನಾಡುತ್ತಿರುವುದು ಕೇಳಿ ಬರತ್ತಾ ಇದೆ…ಇವರ ಮಾತುಗಳನ್ನ ಕೇಳಿದ್ದರೆ ದಾಖಲಾದ ಕೇಸ್ ಗೂ ನಡೆದ ಘಟನೆಗೂ ಅಜಗಜಾಂತರ ವ್ಯತ್ಯಾಸಗಳು ಕಂಡು ಬರತ್ತಾ ಇದೆ. ಈ ಪ್ರಭಾವಿ ವ್ಯಕ್ತಿಗಳ ರಕ್ಷಣೆಗೆ ನಿಂತ ಆ ಮಾಹಾ ಪ್ರಭಾವಿ ನಾಯಕ ಯಾರು ಎನ್ನುವುದು ಈಗ ಎರಡು ಜಿಲ್ಲೆಯ ಸಾಮಾನ್ಯ ಜನರಿಗೆ ಅರ್ಥಾವಾಗಿರುವಂತಿದೆ.