ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಜಗತ್ತಿನಲ್ಲಿರುವ ಎಲ್ಲ ಸುಖ, ಸಮೃದ್ಧಿಗಳನ್ನು ಯಜ್ಞಗಳ ಮೂಲಕ ಪಡೆಯಬಹುದು. ಆದರೆ ಮೋಕ್ಷ ಮತ್ತು ಭಗವಂತನ ಸಾಕ್ಷಾತ್ಕಾರವಲ್ಲ. ಮೋಕ್ಷಕ್ಕೆ ನೀವು ಮನಸ್ಸಿನ ದ್ವಾರ, ಬುದ್ದಿಯ ದ್ವಾರ ಇಂದ್ರೀಯಗಳನ್ನು ಛೇದಿಸಿಕೊಂಡು ಒಳಗೊಳಗೆ ಹೋದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಮಹಾಮಂಡಲೇಶ್ವರ ೧೦೦೮ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ನುಡಿದರು.
ತಾಲೂಕಿನ ಕೋನಳ್ಳಿಯಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ನಿರತರಾದ ಮಹಾಮಂಡಲೇಶ್ವರ ೧೦೦೮ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು ೧೪ನೇ ದಿನದ ಕಾರ್ಯಕ್ರಮದಲ್ಲಿ ಕೂಟದಿಂದ ಗುರು ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಯಜ್ಞಗಳು ನಿಮ್ಮಿಷ್ಠಗಳನ್ನು ಈಡೇರಿಸುವ ಕಾಮದೇನುವಾಗಲಿ ಎಂದು ಭಗವಂತ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಯಜ್ಞಗಳಲ್ಲಿ ಸಲ್ಲಿಕೆಯಾಗುವ ಹವಿಸ್ಸುಗಳನ್ನು ದೇವತೆಗಳು ಸ್ವೀಕರಿಸಿ, ನಿಮಗೆ ಸುಖ ಸಮೃದ್ಧಿಯನ್ನು ನೀಡುತ್ತಾರೆ. ಆದರೆ ಮೋಕ್ಷವನ್ನಲ್ಲ. ಮೋಕ್ಷಕ್ಕಾಗಿ ನೀವೆ ದುಡಿಯಬೇಕಾಗುತ್ತದೆ. ಮನಸ್ಸಿನ ದ್ವಾರ, ಬುದ್ದಿಯ ದ್ವಾರ ಇಂದ್ರೀಯಗಳನ್ನು ಛೇದಿಸಿಕೊಂಡು ಒಳಗೊಳಗೆ ಹೋದಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ. ಅದಕ್ಕೆ ಚಾತುರ್ಮಾಸ್ಯ ವ್ರತಾಚರಣೆ ಕಾರ್ಯಕ್ರಮ ಪೂರಕವಾಗಿದೆ. ಕೊಟ್ಟಿದ್ದು ನನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬAತೆ. ನಾವು ದುಡಿದ್ದಲ್ಲಿ ದಾನಧರ್ಮವನ್ನು ಮಾಡಬೇಕು. ಕೊಡುವುದೇ ಬದುಕಿನ ಸಾರ. ನಾವು ಸಮಾಜಕ್ಕೆ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಹಂಚಿದಷ್ಟು ದ್ವಿಗುಣವಾಗಿ ನಮ್ಮೆಡೆ ಬರುತ್ತದೆ. ನಮ್ಮ ಪೂರ್ವಾಜಿತ ಪುಣ್ಯದಿಂದಲೇ ಜೀವನದಲ್ಲಿ ಅಭ್ಯುದಯವಾಗುತ್ತದೆ. ಹಾಗಾಗಿ ಭಗವಂತನನ್ನು ಯಾವ ಕಾರಣಕ್ಕೂ ದೂರಬಾರದು. ನಮಗೆ ಕೊಟ್ಟಿದ್ರಲ್ಲೆ ನೆಮ್ಮದಿಯಿಂದ ಇರಬೇಕು. ಉದಾತವಾದ ಸತ್ಯದಿಂದ ಮನುಷ್ಯ ಬದಲಾಗುತ್ತಾನೆ. ಚಾತುರ್ಮಾಸ್ಯ ಎಂಬುದು ಉದಾತ ಸತ್ಯ. ಇದರಲ್ಲಿ ಪಾಲ್ಗೊಂಡು ನಿಮ್ಮ ಮನಸ್ಸನ್ನು ಭಗವಂತನೆಡೆಗೆ ಕೊಂಡೊಯ್ಯದರೆ ಮನಸ್ಸು ಹಗುರವಾಗುತ್ತದೆ. ಮನಸ್ಸಿಗೆ ನಿರಂತರವಾದ ಅಭ್ಯಾಸ ಮಾಡಿಸಿದರೆ ಈ ಜಗತ್ತಿನಲ್ಲಿ ಯಾವುದನ್ನಾದರೂ ಪಡೆಯಬಹುದು. ಭಗವಂತನನ್ನೂ ಸಾಕ್ಷಾತ್ಕರಿಸಿಕೊಳ್ಳಬಹುದು ಎಂದು ಶ್ರೀಗಳು ನುಡಿದರು.
ಈ ಸಂದರ್ಭದಲ್ಲಿ ಹರಿಯಾಣದ ಜುನಾ ಅಖಾಡಾ ಮಹಾತ ಭೋಲಾನಾಥ ಗುರುಗಳಾದ ಸ್ವಾಮಿ ಭೋಲಾಗಿರಿ ಹರಿಯಾಣ ಅವರು ಭಾಗಿಯಾಗಿದ್ದರು. ಗುರುಗಳನ್ನು ಚಾತುರ್ಮಾಸ್ಯ ವ್ರತಾಚರಣೆ ಸಮಿತಿವತಿಯಿಂದ ಗೌರವಿಸಲಾಯಿತು. ಚಾತುರ್ಮಾಸ್ಯ ವ್ರತಚಾರಣೆಯ ೧೪ನೇ ದಿನದ ಕಾರ್ಯಕ್ರಮದಲ್ಲಿ ಹನೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹನೇಹಳ್ಳಿ ಹಾಗೂ ಬಂಕಿಕೊಡ್ಲ ಗ್ರಾಮದ ಸಮಸ್ತ ನಾಮಧಾರಿ ಸಮಾಜ ಬಾಂಧವರು ಗುರುಪಾದುಕಾ ಪೂಜೆ ಸಲ್ಲಿಸಿದರು. ಆಚಾರಿ ಸಮಾಜದ ಪ್ರಮುಖರಾದ ಮಂಜುನಾಥ ಆಚಾರಿ, ನಾಗರಾಜ ಗುನಗಾ ಮುರ್ಕುoಡೆಶ್ವರ ದೇವಸ್ಥಾನದ ಮುಖ್ಯ ಅರ್ಚಕರು ಬಂಕಿಕೊಡ್ಲ ಇವರು ಆಗಮಿಸಿದ್ದರು. ಭೈರವ. ಡಿ. ನಾಯ್ಕ್ ದಂಪತಿ ಬಂಕಿಕೊಡ್ಲ ಗುರು ಸೇವೆ ಸಲ್ಲಿಸಿದರು.
ಬಳಿಕ ಶ್ರೀಗಳು ಭಕ್ತರಿಗೆ ಫಲಮಂತ್ರಾಕ್ಷತೆ ವಿತರಿಸಿದರು. ಮಧ್ಯಾಹ್ನ ನಡೆದ ಪ್ರಸಾದ ಭೋಜನದಲ್ಲಿ ಸಾವಿರಕ್ಕೂ ಅಧಿಕ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಧನ್ಯತೆ ಮೆರೆದರು.
ಇದನ್ನೂ ಓದಿ: ಅಕ್ರಮ ಕ್ಲಬ್ ನಡೆಸುತ್ತಿದ್ದ ಡಾ.ಬಸವರಾಜ ವೀರಾಪುರ ಪೊಲೀಸರ ಬಲೆಗೆ