ಸುದ್ದಿಬಿಂದು ಬ್ಯೂರೋ ವರದಿ
ಕಾಣಕೋಣ (ಗೋವಾ): ಜೂಜಾಟ ಆಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಉತ್ತರಕನ್ನಡ, ಶಿವಮೊಗ್ಗ ಜಿಲ್ಲೆಯ 40ಮಂದಿಯನ್ನ ಬಂಧಿಸಿ 16ಲಕ್ಷ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದ ಘಟನೆ ಗೋವಾ ರಾಜ್ಯದ ಪೊಲೇಂ ಪೊಲೀಸ್ ಠಾಣಾ ವ್ಯಾಪ್ತಿಯ ಲೋಲಿಯಂ ಗ್ರಾಮದ ದುಲ್‌ಗಳ್ಳಿ ಪ್ರದೇಶದ ತೆಲ್ಮಾ ಎಂಬ ಮನೆಯೊಂದರಲ್ಲಿ ನಡೆದಿದೆ.
ಕುಮಟಾ, ಶಿವಮೊಗ್ಗ, ಯಲ್ಲಾಪುರ, ಅಂಕೋಲಾ ಹಾಗೂ ಗೋವಾ ಮೂಲದವರು ಸೇರಿದಂತೆ ಒಟ್ಟು 40 ಮಂದಿಯನ್ನ ಇಂದು ಮಂಗಳವಾರ ಬಂಧಿಸಲಾಗಿದೆ. ಬಂಧಿತರು ಲೋಲಿಯಂ ಗ್ರಾಮದ ದುಲ್‌ಗಳ್ಳಿ ಪ್ರದೇಶದ ತೆಲ್ಮಾ ಎಂಬ ಮನೆಯಲ್ಲಿ ಕಳೆದ ಅನೇಕ ತಿಂಗಳುಗಳಿಂದ ಜೂಜಾಟ ನಡೆಸಿಕೊಂಡು ಬಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತವಾದ ಮಾಹಿತಿಯನ್ನ ಪಡೆದ ಪೊಲೀಸರು ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಎಲ್ಲರನ್ನ ಬಂಧಿಸಿದ್ದಾರೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯವರೆ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎನ್ನಲಾಗಿದೆ.
ಕಂಪ್ಯೂಟರ್ ಹಾಗೂ ಇನ್ನಿತರ ಉಪಕರಣಗಳು, 40 ಮೊಬೈಲ್ ಫೋನ್, KA-30-A-6586 ನಂಬರ್‌ನೊಂದಿರುವ ಎರ್ಟಿಕಾ ಕಾರನ್ನ ವಶಕ್ಕೆ ಪಡೆಯಲಾಗಿದ್ದು ಒಟ್ಟು ಮೌಲ್ಯ: 16,35,000 ಆಗಬಹದು ಎಂದು ಅಂದಾಜಿಸಲಾಗಿದೆ.
ಈ ಸಂಬಂಧವಾಗಿ ಪೊಲೀಸ್‌ಗಳು PG Act ಸೆಕ್ಷನ್ 3 ಮತ್ತು 4, ಜೊತೆಗೆ ಭಾರತೀಯ ದಂಡ ಸಂಹಿತೆಯ (BNS) ಸೆಕ್ಷನ್ 112 ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.