ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ; ನಗರದ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಾರವೊಂದರ ಮಳೆ ಮರ ಬಿದ್ದು, ಕಾರನಲ್ಲಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಪಿಕಳೆ ರಸ್ತೆಯಲ್ಲಿ ನಡೆದಿದೆ.

ಮೃತ ಮಹಿಳೆ ಮಲ್ಲಾಪುರ ಗ್ರಾಮದ ಲಕ್ಷ್ಮೀ ನಾರಾಯಣ ಮಮ್ತೆಕರ (55) ಎಂದು ಗುರುತಿಸಲಾಗಿದೆ. ಗರ್ಭಿಣಿಯಾದ ಸೊಸೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಸೊಸೆ ಆಸ್ಪತ್ರೆ ಒಳಗೆ ಹೋಗಿದ್ದಾಗ ಲಕ್ಷ್ಮೀ ಮಮ್ತೆಕರ ಕಾರಿನೊಳಗೆ ಕುಳಿತುಕೊಂಡಿದ್ದರು. ಈ ವೇಳೆಗ ಬುಡ ಸಮೇತ ಬೃಹತ್ ಮರವೊಂದು ಕಾರಿನ ಮೇಲೆ ಉರುಳಿ ಬಿದ್ದಿದೆ..

ಘಟನೆಯಿಂದಾಗಿ ಲಕ್ಷ್ಮೀ ಮಮ್ತೆಕರ ಕಾರಿನೊಳಗೆ ಸಿಲುಕಿದರು. ಸ್ಥಳಕ್ಕೆ ಅಗ್ನಿಶಾಮಕದಳ ಹಾಗೂ ಕಾರವಾರ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಧಾವಿಸಿ, ಮರವನ್ನು ತೆರವುಗೊಳಿಸಿ ಗಾಯಗೊಂಡಿದ್ದ ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಆದರೆ ಆಸ್ಪತ್ರೆಗೆ ಸಾಗಿಸುವಾಗಲೇ ಅವರು ಮೃತಪಟ್ಟಿದ್ದಾರೆ, ಆಸ್ಪತ್ರೆಯಲ್ಲಿ ವೈದ್ಯರು ಸಾವನ್ನು ದೃಢಪಡಿಸಿದರು. ಕಾರವಾರದಲ್ಲಿ ಪದೆ ಪದೆ ಮರ ಉರುಳು ಬಿಳುವ ಘಟನೆ ನಡೆಯುತ್ತಿದ್ದು, ರಸ್ತೆ ಬದಿಯಲ್ಲಿ ನಿಲ್ಲುವುದು, ವಾಹನ ನಿಲ್ಲಿಸುವುದಕ್ಕೆ ಭಯ ಪಡುವಂತಾಗಿದೆ.

ಇದನ್ನೂ ಓದಿ: jsw, ಕಂಪನಿಗೆ ಪಂಗನಾಮ ಹಾಕಿದ ಅಜಿತ್ ನಾಯಕ ಸಹಚರನ ಬಂಧನ
.