ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಿನ ಬಾಡ ಗ್ರಾಮದ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಾಗರಾಜ ಮುರ್ಕುಂಡಿ ನಾಯ್ಕ, ಉಪಾಧ್ಯಕ್ಷರಾಗಿ ದತ್ತಾತ್ರೇಯ ಹನಮು ಪಟಗಾರ ಅವಿರೋಧವಾಗಿ ಆಯ್ಕೆ ಗೊಂಡಿದ್ದಾರೆ.

12ಸದಸ್ಯರ ಬಲ ಹೊಂದಿರುವ ಬಾಡ ರೈತ ಸೇವಾ ಸಹಕಾರಿ ಸಂಘದ ಸದ್ಯರ ಆಯ್ಕೆಗಾಗಿ ಇತ್ತಿಚೇಗೆ ಚುನಾವಣೆ ನಡೆದಿತ್ತು.ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡು ಸ್ಥಾನಕ್ಕೂ ಹಲವರು ಪೈಪೋಟಿ ನಡೆಸಿದ್ದರಾದ್ರೂ ಕೊನೆಗೆ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಇವರ ಆಯ್ಕೆಗೆ ಎಲ್ಲಾ ಸದಸ್ಯರು ಹಾಗೂ ರೈತ ಸೇವಾ ಸಹಕಾರಿ ಸಂಘದ ಶೇರುದಾರ ಸದಸ್ಯರು ಅಭಿನಂದನೆ ಸಲ್ಲಿಸಿದ್ದು, ಇವರ ಅವಧಿಯಲ್ಲಿ ಬಾಡ ರೈತ ಸೇವಾ ಸಹಕಾರಿ ಸಂಘ ಇನ್ನಷ್ಟು ಲಾಭದಲ್ಲಿ ಮುನ್ನಡೆಯಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ: ಜಿಲ್ಲಾಧಿಕಾರಿಗಳ ಕಾರು ಜಪ್ತಿ…