ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ದಿನಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ವಿಷಯಕ್ಕೆ ಜೀವಂತಿಕೆ ತುಂಬಿ ಸಮಾಜದ ಎದುರಿಗೆ ವಿಷಯವನ್ನು ತಲುಪಿಸಲಾಗುತ್ತದೆ.ಇಂದು ಜ್ಞಾನವೇ ಶಕ್ತಿ, ಜ್ಞಾನ ಇದ್ದಾಗ ಮಾತ್ರ ನಮ್ಮಲ್ಲಿ ಆತ್ಮವಿಶ್ವಾಸ ಇರುತ್ತದೆ ಎಂದು ಪತ್ರಕರ್ತ ಪ್ರಮೋದ ಹರಿಕಾಂತ ಹೇಳಿದರು.

ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಟೈಮ್ಸ್ ಆಫ್ ಇಂಡಿಯಾ ಮತ್ತು ವಿಜಯ ಕರ್ನಾಟಕ ದಿನಪತ್ರಿಕೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಪ್ರೀತಿ ಪಿ. ಭಂಡಾರಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಪಂಚದ ವಿದ್ಯಮಾನವನ್ನು ಸಮಾಜಕ್ಕೆ ಸರಳವಾಗಿ ಅಚ್ಚುಕಟ್ಟಾಗಿ ಜನಸಾಮಾನ್ಯನಿಗೂ ಅರ್ಥವಾಗುವಂತೆ ತಿಳಿಸುವ ಮಾಧ್ಯಮ ಪತ್ರಿಕೆ. ಸಾಮಾಜಿಕ ಜವಾಬ್ದಾರಿಯನ್ನು ಪತ್ರಿಕೆ ಹೊಂದಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ರೋಹನ ಮತ್ತು ಸನತ್ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕರಾದ ಎಸ್. ಕೆ ಭಟ್ ಅವರು ಸ್ವಾಗತಿಸಿ ವಿಶೇಷ ಉಪನ್ಯಾಸಕರನ್ನು ಸಭೆಗೆ ಪರಿಚಯಿಸಿದರು. ವಿಜಯ ಕರ್ನಾಟಕ ಮಿನಿ ಪತ್ರಿಕೆ ಆಧಾರಿತ ಲಿಖಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದ ಶಿಕ್ಷಕ ವಿದ್ಯಾರ್ಥಿಗಳ ಯಾದಿಯನ್ನು ಉಪನ್ಯಾಸಕಿ ಗಾಯತ್ರಿ ಪೈ ವಾಚಿಸಿದರು. ಪ್ರಥಮ ಬಹುಮಾನವನ್ನು ಕೆ. ಆಂಜನೇಯ,ದ್ವಿತೀಯ ಬಹುಮಾನವನ್ನು ಅನೀಲ ಲಮಾಣಿ,ತೃತೀಯ ಬಹುಮಾನವನ್ನು ವಿಜಯಕುಮಾರ್ ಮತ್ತು ಚೇತನಾ ಗೌಡ ಹಾಗೂ ಸಮಾಧಾನಕರ ಬಹುಮಾನವನ್ನು ಮೇಘನಾ ಹೆಗಡೆ, ರವಿಕುಮಾರ್,ಸಂಧ್ಯಾ ನಾಯ್ಕ ಮತ್ತು ಸೌಮ್ಯ ನಾಯ್ಕ ಪಡೆದರು. ಶಿಕ್ಷಕ ವಿದ್ಯಾರ್ಥಿಗಳಾದ ಮೇಘನಾ ಹೆಗಡೆ ಮತ್ತು ಅನೀಲ ಲಮಾಣಿ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಶಿಕ್ಷಕ ವಿದ್ಯಾರ್ಥಿನಿ ಶುಭಾ ನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಜಿ. ಡಿ. ಭಟ್, ವಿಜಯಕರ್ನಾಟಕ ದಿನಪತ್ರಿಕೆಯ ಹಿರಿಯ ಅಧಿಕಾರಿಗಳಾದ. ಬಸಯ್ಯ ಹಿರೇಮಠ ಮತ್ತು ಸಹ ಪ್ರಾಧ್ಯಾಪಕರಾದ ಉಮೇಶ ನಾಯ್ಕ ಎಸ್‌. ಜೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪಲ್ಲವಿ ಗೌಡ ಮತ್ತು ಸ್ವಾತಿ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.

ಇದನ್ನೂ ಓದಿ:ವರದಿಗಾರ ಗುರುಪ್ರಸಾದ ಹೆಗಡೆ ನಿಧನ