ಹೆರಿಗಾಗಿ ಮಹಿಳೆ ಸರಕಾರಿ ಆಸ್ಪತ್ರೆಗೆ ಹೋಗಿದ್ದ ವೇಳೆ ತಪಾಸಣೆ ಮಾಡಿದ ಅಲ್ಲಿನ ವೈದ್ಯರು ಮಹಿಳೆಯ ಗರ್ಭದಲ್ಲಿಯೇ ಮಗು ಸಾವನ್ನಪ್ಪಿರುವುದಾಗಿ ಹೇಳಿದ್ದು, ಇದರಿಂದಾಗಿ ಆ ದಂಪತಿಗಳಿಗೆ ಒಮ್ಮೆ ಶಾಕ್ ಆಗಿದೆ. ದೇವರ ಮೇಲೆ ಬಾರ ಹಾಕಿದ ದಂಪತಿಗಳು ಸರಕಾರಿ ಆಸ್ಪತ್ರೆ ಬಿಟ್ಟು ಖಾಸಗಿ ಆಸ್ಪತ್ರೆಗೆ ಹೋಗಿ ತಪಾಸಣೆ ನಡೆಸಿದ್ದಾರೆ.ಈ ವೇಳೆ ಆ ತಪಾಷಣೆ ನಡೆಸಿದ ಖಾಸಗಿ ಆಸ್ಪತ್ರೆಯ ವೈದ್ಯರು ಮಗು ಆರೋಗ್ಯವಾಗಿದೆ. ಎಂದು ಹೇಳಿದ್ದಾರೆ. ನಂತರ ಮಹಿಳೆ ಅದೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ, ಸದ್ಯ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ, ಈ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ರಾಂಪುರ ಬಾಗ್ಲಾನ್ ಪಟ್ಟಣದ ಬಳಿಯ ಚಕೇರಾ ಗ್ರಾಮದಲ್ಲಿ ನಡೆದಿದೆ.
ದುರ್ಗಾ ದ್ವಿವೇದಿ (24) ಎಂಬ ಮಹಿಳೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದವಳಾಗಿದ್ದಾಳೆ, ಜುಲೈ 15 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ದುರ್ಗಾ ಅವರನ್ನು ಅಮರ್‌ಪಟನ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದಾಗ್ಯೂ, ಗರ್ಭಿಣಿಯ ಸ್ಥಿತಿ ಗಂಭೀರವಾಗಿದ್ದರಿಂದ, ಆಶಾ ಕಾರ್ಯಕರ್ತೆಯರು ಸಹಾಯದಿಂದ ಸತ್ನಾ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು.ಬೆಳಿಗ್ಗೆ 7.30ಕ್ಕೆ ದುರ್ಗಾ ಜಿಲ್ಲಾ ಆಸ್ಪತ್ರೆಗೆ ತಲುಪಿದರು ಮತ್ತು ವೈದ್ಯರು ಮೊದಲು ಅವರ ರಕ್ತ ಪರೀಕ್ಷೆ ಮಾಡಿದರು.ನಂತರ ಬೆಳಿಗ್ಗೆ 9 ಗಂಟೆಗೆ ಹಿರಿಯ ವೈದ್ಯರು ಡಾಪ್ಲರ್ ಮತ್ತು ಸೋನೋಗ್ರಫಿ ಪರೀಕ್ಷೆಯನ್ನು ನಡೆಸಿದರು.ಈ ಸಮಯದಲ್ಲಿ,ಮಗು ಜೀವಂತವಾಗಿಲ್ಲ ಎಂದು ತೀರ್ಮಾನಿಸಲಾಯಿತು. ಹೃದಯ ಬಡಿತ ಇಲ್ಲದಿರಲು ಕಾರಣವನ್ನು ಆಧರಿಸಿ, ಮಗು ಮೃತಪಟ್ಟಿದ್ದು, ತಕ್ಷಣ ಗರ್ಭಪಾತ ಮಾಡಬೇಕೆಂದು ವೈದ್ಯರು ಸೂಚಿಸಿದರು.
ಆದರೆ ದುರ್ಗಾಳ ಪತಿ ರಾಹುಲ್ ದ್ವಿವೇದಿ ಈ ನಿರ್ಧಾರವನ್ನು ಒಪ್ಪಲಿಲ್ಲ. “ಹೃದಯ ಬಡಿತ ಇಲ್ಲ ಎಂದು ವೈದ್ಯರು ಹೇಳಿದ್ದರೂ, ನಾವು ಮತ್ತೆ ಖಚಿತಪಡಿಸಿಕೊಳ್ಳಲು ನಿರ್ಧರಿಸಿದ್ದೇವೆ” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು. ನಂತರ ದಂಪತಿಗಳು ಭಾರ್ಹೂತ್‌ನಗರದ ಖಾಸಗಿ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡರು.ಅಲ್ಲಿ,ಮಗು ಜೀವಂತವಾಗಿದೆ ಮತ್ತು ಆರೋಗ್ಯವಾಗಿದೆ ಎಂದು ಹೇಳಿದ್ದಾರೆ. ತಕ್ಷಣ ಖಾಸಗಿ ನರ್ಸಿಂಗ್ ಹೋಂಗೆ ದಾಖಲಿಸಲಾಯಿತು.
ಇಲ್ಲಿನ, ವೈದ್ಯರು ಸಿಸೇರಿಯನ್ ಮೂಲಕ 3.5 ಕೆಜಿ ಗಂಡು ಮಗುವನ್ನು ಯಶಸ್ವಿಯಾಗಿ ಹೆರಿಗೆ ಮಾಡಿದ್ದಾರೆ. ಈ ಸುದ್ದಿ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು,ಜಿಲ್ಲಾಧಿಕಾರಿ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ಮೂಲಗಳ ಪ್ರಕಾರ, ಹಿರಿಯ ರೇಡಿಯಾಲಜಿಸ್ಟ್ ಮತ್ತು ಸ್ತ್ರೀರೋಗ ತಜ್ಞರು ಸೇರಿದಂತೆ ಮೂವರು ವೈದ್ಯರ ಹೆಸರುಗಳು ಆರಂಭಿಕ ತನಿಖೆಯಲ್ಲಿ ಕೇಳಿಬಂದಿವೆ. ಸಿಎಂಹೆಚ್‌ಒ ಡಾ. ಎಲ್.ಕೆ. ತಿವಾರಿ ಇದಕ್ಕೆ ಪ್ರತಿಕ್ರಿಯಿಸಿ, “ವಿವರವಾದ ತನಿಖೆ ನಡೆಸಲಾಗುವುದು. ಯಾವುದೇ ಲೋಪ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ : ಲಂಚದ ದಂಧೆ : ಕಾರವಾರ ಮೆಡಿಕಲ್ ಆಸ್ಪತ್ರೆ ಅಧೀಕ್ಷಕ ಅಮಾನತ್