ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ೪೨ದಿನಗಳ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆಯ ೭ನೇ ದಿನವಾದ ಬುಧವಾರ ಹೊನ್ನಾವರ ತಾಲೂಕಿನ ಚಂದಾವರ, ಕಡ್ಲೆ ಗ್ರಾಮಗಳ ಕೂಟದಿಂದ ಗುರು ಸೇವಾ ಕಾರ್ಯಕ್ರಮ ನಡೆಯಿತು.
ಹೊರೆಗಾಣಿಕೆಯನ್ನು ಹೊತ್ತುತಂದ ಸದ್ಭಕ್ತರು ಶ್ರೀಗಳ ಪಾದಕ್ಕೆ ಸಮರ್ಪಿಸಿ, ವಿವಿಧ ಸೇವಾ ಕಾರ್ಯಗಳಿಗೆ ನಿಯೋಜನೆಗೊಂದು ಬೆಳಗ್ಗೆಯಿಂದ ರಾತ್ರಿವರೆಗೂ ಗುರು ಸೇವಾ ಕಾರ್ಯದಲ್ಲಿ ನಿರತರಾಗಿ ಧನ್ಯತೆ ಪಡೆದರು. ಚಂದಾವರ ಗ್ರಾ ಪಂ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಚಂದ್ರಕಾOತ ಶಿವಪ್ಪ ನಾಯ್ಕ ದಂಪತಿ, ಸೀತಾರಾಮ ಈಶ್ವರ ನಾಯ್ಕ, ಗಣಪತಿ ನಾಗಪ್ಪ ನಾಯ್ಕ, ಶಿವಾನಂದ ಗಣಪತಿ ನಾಯ್ಕ ತಂಡ ಗುರುಗಳ ಪಾದ ಪೂಜೆ ಗೈದು, ಶ್ರೀಗಳಿಂದ ಫಲಮಂತ್ರಾಕ್ಷತೆ ಪಡೆದರು. ಅಲ್ಲದೇ ಹೋದ್ಕೆ ಶಿರೂರು ೧, ಹೋದ್ಕೆ ಶಿರೂರು ೨, ಹೋದ್ಕೆ, ಕಡ್ನಿರು ಮತ್ತು ಗ್ರಾಮ ಪಂಚಾಯತ್ ಕಡ್ಲೆ ಹಾಗೂ ನಿಲ್ಕೋಡು ಗ್ರಾಮದ ಸಮಸ್ತ ನಾಗರಿಕರು ಗುರುಪಾದುಕ ಪೂಜೆ ಸಲ್ಲಿಸಿ, ಕೃತಾರ್ಥರಾದರು.
ಈ ಸಂದರ್ಭದಲ್ಲಿ ಮಂಗಳೂರು ಶಾಸಕರಾದ ಡಾ ಭರತ ಶೆಟ್ಟಿ ಮತ್ತು ಬಿಜೆಪಿ ರಾಜ್ಯ ವಕ್ತಾರರು ಮತ್ತು ಸಂವಿಧಾನ ತಿದ್ದುಪಡಿ ಹೋರಾಟದ ಪ್ರಮುಖ ರೂವಾರಿಗಳಾದ ವಾಗ್ಮಿ ವಿಕಾಸ ಪುತ್ತೂರು ಅವರು ಶ್ರೀಗಳಿಗೆ ಪಾದ ಪೂಜೆ ಸಲ್ಲಿಸಿ, ಗುರುಗಳಿಂದ ಫಲಮಂತ್ರಾಕ್ಷತೆ ಆಶೀರ್ವಾದ ಪಡೆದರು.
ಬಳಿಕ ಆಶೀರ್ವಚನ ನೀಡಿದ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರು, ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗುವಾಗಲೂ ಅನೇಕ ಅಡ್ಡಿ, ಆತಂಕಗಳು ಎದುರಾಗುತ್ತದೆ. ಅದನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ನಮ್ಮ ಮನಸ್ಸು ದೇವರಲ್ಲಿ ಕೇಂದ್ರೀಕೃತಗೊಳ್ಳಲು ಸಾಧ್ಯ. ಸತ್ಸಂಗ, ಭಜನೆಗಳು ನಮ್ಮ ಮನಸ್ಸನ್ನು ಶಾಂತವಾಗಿರುತ್ತದೆ. ಭಗವಂತ ನಮ್ಮ ಸುತ್ತಲೂ ಇರುತ್ತಾನೆ. ಆದರೆ ನಮ್ಮ ಬರೀ ಗಣ್ಣಿಗೆ ಅವನ ದರ್ಶನವಾಗಲ್ಲ. ನಾವು ಮಾಯೆಗೆ ಒಳಗಾಗಿರುತ್ತೇವೆ. ಸ್ವಾಭಿಮಾನ.ಸಾತ್ವಿಕತೆಯಿಂದ ಬದುಕಿದಾಗ ಜಾಗೃತಗೊಳ್ಳುವ ಪ್ರಬಲ ಇಚ್ಛಾಶಕ್ತಿಯಿಂದ ನಮ್ಮ ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳಬಹುದು.ಆ ಮೂಲಕ ದೇವರನ್ನು ಕಾಣಬಹುದು.ಅದಕ್ಕೆ ಪೂರಕವಾಗಲೆಂದೆ ಚಾತುರ್ಮಾಸ್ಯ ವ್ರತಾಚರಣೆಯನ್ನು ನಾವು ನಡೆಸುತ್ತಿದ್ದೇವೆ. ಸದ್ಭಕ್ತರೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಗವಂತನಲ್ಲಿ ನಮ್ಮ ಮನಸ್ಸನ್ನು ಅರ್ಪಿಸಿಕೊಳ್ಳುವಂತೆ ಶ್ರೀಗಳು ಕರೆ ನೀಡಿದರು. ಬಳಿಕ ಶ್ರೀಗಳು ಭಕ್ತರಿಗೆ ಫಲಮಂತ್ರಾಕ್ಷತೆ ವಿತರಿಸಿ, ಹರಸಿದರು. ಮಧ್ಯಾಹ್ನ ಪ್ರಸಾದ ಭೋಜನ ಸ್ವೀಕರಿಸಿದ ಭಕ್ತರು ಧನ್ಯತೆ ಮೆರೆದರು.
ಇದನ್ನೂ ಓದಿ : ಲಂಚದ ನೋಟು ಸಹಿತ ಶಿರಸಿ ನಗರಸಭೆ ಸದಸ್ಯ, ಅಧಿಕಾರಿ ಲೋಕಾಯುಕ್ತ ಬಲೆಗೆ