ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ತಾಲೂಕಿ ಬರ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ನಾಡವರ ಕೊಪ್ಪ ಸ್ಮಶಾನವನ್ನ ಸಾರ್ವಜನಿಕರ ದೇಣಿಗೆಯಿಂದ ಸ್ಮಶಾನದ ಮೇಲ್ಚಾವಣಿ ಹಾಕಲಾಗಿದೆ.
ಬರ್ಗಿಯ ನಾಡವರ ಕೊಪ್ಪದ ಸ್ಮಶಾನಕ್ಕೆ ಈ ಹಿಂದೆ ಗ್ರಾಮ ಪಂಚಾಯತ ಅನುದಾನದಲ್ಲಿ ಒಂದಿಷ್ಟು ಕಾಮಗಾರಿಗಳನ್ನ ಮಾಡಲಾಗಿತ್ತು. ಆದರೆ ಮುಖ್ಯವಾಗಿ ಬೇಕಾಗಿದ್ದ ಮೇಲ್ಚಾವಣಿ ಹಾಕಿರಲಿಲ್ಲ. ಆದರೆ ಮಳೆಗಾಲದಲ್ಲಿ ಯಾರಾದರೂ ಮೃತಪಟ್ಟಿದ್ದರೆ ಸ್ಮಶಾನದಲ್ಲಿ ಕಾರ್ಯ ಮಾಡಲು ಸಮಸ್ಯೆ ಉಂಟಾಗುತ್ತಿತ್ತು.ಹೀಗಾಗಿ ಸ್ಮಶಾನಕ್ಕೆ ಮೇಲ್ಛಾವಣಿ ಅನಿರ್ವಾಯವಾಗಿರುವ ಕಾರಣ ಅದರ ಮೇಲ್ಛಾವಣಿಗೆಗೆ ಬೇಕಾಗ ಸುಮಾರು ೬೦ ಸಾವಿರ ರೂಪಾಯಿ ಹಣವನ್ನ ಸ್ಥಳೀಯರಿಂದ ದೇಣಿಗೆ ಪಡೆದು ಸದ್ಯ ಮೇಲ್ಛಾವಣಿ ಕೆಲಸವನ್ನ ಮಾಡಲಾಗಿದೆ.
ಸ್ಮಶಾನದ ಸುತ್ತ ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇದ್ದು, ಅದನ್ನೂ ಸಹ ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಬೇಕಿದೆ. ಆದರೆ ಈಗಾಗಲೇ ಸಾರ್ವಜನಿಕರಿಂದ ಸಂಗ್ರಹಿಸಲಾದ ಹಣ ಮೇಲ್ಛಾವಣಿಗೆ ಖರ್ಚಾಗಿದ್ದು, ಉಳಿದ ಕಾಮಗಾರಿಗಾಗಿ ಮತ್ತೆ ಸಾರ್ವಜನಿಕರಿಂದ ದೇಣಿಗೆ ಮಾಡಬೇಕಿದೆ.ಹೀಗಾಗಿ ದೇಣಿಗೆ ನೀಡುವವರಿದ್ದಲ್ಲಿ ಸ್ಮಶಾನ ಅಭಿವೃದ್ಧಿ ಸಮಿತಿಯನ್ನ ಸಂಪರ್ಕಿಸಿ ದೇಣಿಗೆ ನೀಡಬಹುದಾಗಿದೆ.